ಬೆಂಗಳೂರು: ಕೊರೋನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವೆನಿಸಿದ ಆಕ್ಸಿಜನ್ ಅನ್ನು ಎರಡನೇ ಬಾರಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಎಕ್ಸ್ಪ್ರೆಸ್ ರೈಲಿನ ಮೂಲಕ ರವಾನಿಸಿದೆ. ಈ ಬಾರಿ 120 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ಕಳುಹಿಸಿದೆ.
ಈ ರೈಲು ಕಳಿಂಗ ನಗರಿಯಿಂದ ಬೆಂಗಳೂರಿಗೆ ಬಂದಿಳಿದಿದ್ದು, ಈ ಸಂಬಂಧ ಸೌತ್ವೆಸ್ಟರ್ನ್ ರೈಲು ಆಕ್ಸಿಜನ್ ಹೊತ್ತು ಬಂದು ತಲುಪಿರುವ ಬಗ್ಗೆ ಮಾಹಿತಿ ನೀಡಿದೆ. ಇಂದು ಮುಂಜಾನೆ 3.20 ರ ಸುಮಾರಿಗೆ ಈ ರೈಲು ನಗರಕ್ಕೆ ತಲುಪಿರುವುದಾಗಿ ತಿಳಿಸಿದೆ.
ಆರು ಕಂಟೇನರ್ಗಳ ಮೂಲಕ ತಲಾ 20 ಮೆಟ್ರಿಕ್ ಟನ್ ಗಳಂತೆ 120 ಮೆಟ್ರಿಕ್ ಟನ್ ಆಕ್ಸಿಜನ್ ರವಾನಿಸಲಾಗಿದೆ. ಮೇ 11 ರಂದು ಸಹ ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ 120 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಕರ್ನಾಟಕಕ್ಕೆ ತಲುಪಿಸಿತ್ತು. ಆ ಮೂಲಕ ಒಟ್ಟು 240 ಮೆಟ್ರಿಕ್ ಟನ್ ಆಕ್ಸಿಜನ್ ರಾಜ್ಯಕ್ಕೆ ಬಂದಿಳಿದಿದೆ.
The second #OxygenExpress to Karnataka with 120 MT LMO from Kalinganagar reached Bengaluru this morning.
ಕರ್ನಾಟಕದ ಎರಡನೇ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ಕಳಿಂಗನಗರದಿಂದ 120 ಟನ್ ಆಕ್ಸಿಜನ್ ಹೊತ್ತು ಇಂದು ಬೆಳಗಿನ ಜಾವ ಬೆಂಗಳೂರಿಗೆ ತಲುಪಿದೆ.
.@PiyushGoyal
.@PIBBengaluru
.@RailMinIndia pic.twitter.com/npexh031eW— South Western Railway (@SWRRLY) May 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.