ಬೆಂಗಳೂರು: ಬಿಬಿಎಂಪಿಯ ಪ್ರತಿ ವಲಯಗಳಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗೆ 500 ಐಸಿಯು ಹಾಸಿಗೆಗಳ ಆರೈಕೆ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ನೋಡಲ್ ಅಧಿಕಾರಿಯನ್ನಾಗಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಆಯುಕ್ತ ಹರ್ಷ ಪಿ ಎಸ್ ಅವರನ್ನು ನೇಮಕ ಮಾಡಿದೆ.
ಹರ್ಷ ಅವರ ನೇತೃತ್ವದ ತಂಡ ಕೊರೋನಾ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶನ ಮಾಡಲಿದೆ. ಹಾಸಿಗೆಗಳ ಹೆಚ್ಚಳ ಮೊದಲಾದ ಮೂಲಭೂತ ಅಗತ್ಯತೆಗಳ ಹೊಂದಾಣಿಕೆಗೆ ಹಲವು ಕಾರ್ಪೊರೇಟ್ ಸಂಸ್ಥೆಗಳು ಬೆಂಬಲ ಸೂಚಿಸಿ ಮುಂದೆ ಬಂದಿರುವುದಾಗಿಯೂ ಮಾಧ್ಯಮವೊಂದಕ್ಕೆ ಹರ್ಷ ತಿಳಿಸಿದ್ದಾರೆ.
ಈ ಸಂಬಂಧ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್ ಆಸ್ಪತ್ರೆಯಲ್ಲಿ 86 ಹಾಸಿಗೆಗಳ ಕ್ರಿಟಿಕಲ್ ಕೇರ್ ಐಸಿಯು ಯುನಿಟ್ ಆರಂಭಿಸಲು ಟೆಕ್ಸಾಸ್ ಮುಂದೆ ಬಂದಿದೆ. ಕುಷ್ಠರೋಗ ಆಸ್ಪತ್ರೆ, ಸಾಂಕ್ರಾಮಿಕ ರೋಗ ಆಸ್ಪತ್ರೆ ಮತ್ತು ಜಯನಗರದ ಜನರಲ್ ಆಸ್ಪತ್ರೆ ಗಳಲ್ಲಿ 69 ಐಸಿಯು ಹಾಸಿಗೆಗಳನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡಲು ಇತರ ಕಂಪೆನಿಗಳು ನೆರವು ನೀಡಲು ಭರವಸೆ ನೀಡಿರುವುದಾಗಿ ಅವರು ಹೇಳಿದ್ದಾರೆ.
ಕೊರೋನಾ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿನ ಸಾಮಾನ್ಯ ಹಾಸಿಗೆಗಳನ್ನು ಆಕ್ಸಿಜನ್ ಮತ್ತು ಐಸಿಯು ಬೆಡ್ಗಳನ್ನಾಗಿ ಪರಿವರ್ತಿಸಲು ತಂಡ ಮುಂದಾಗಿದೆ. ಹಾಗೆಯೇ ಅಂತಿಮ ವರ್ಷದ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳನ್ನು ಸಿಬ್ಬಂದಿಗಳನ್ನಾಗಿ ಬಳಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹರ್ಷ ತಿಳಿಸಿದ್ದಾರೆ. ಇದು ಸಮಯದ ಉಳಿತಾಯ ಮತ್ತು ಹೆಚ್ಚು ಮಾನವಶಕ್ತಿಯ ನಿಯೋಜನೆಯನ್ನು ಕಡಿಮೆ ಮಾಡಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಆರ್ಎಸ್ ಫಂಡ್ ಅನ್ನು ಅವಲಂಬಿಸಿ ಈ ಸೌಲಭ್ಯ ಸ್ಥಾಪಿಸಲಾಗುತ್ತದೆ. ಇದರ ಜೊತೆಗೆ ಸರ್ಕಾರ ವೈದ್ಯಕೀಯ ಪರಿಕರಗಳನ್ನು ದೇಣಿಗೆ ಪಡೆಯಲಿದೆ. ಹಾಗೆಯೇ ಐಸಿಯು ಹಾಸಿಗೆಗಳ ನಿರ್ಮಾಣಕ್ಕೆ ಇವುಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಹಲವು ಕಾರ್ಪೊರೇಟ್ ಸಂಸ್ಥೆಗಳ ಜೊತೆಗೂ ಮಾತುಕತೆ ನಡೆಸಲಾಗಿದೆ ಎಂಬುದಾಗಿ ಹರ್ಷ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.