ಬೆಂಗಳೂರು: ಬಿಬಿಎಂಪಿ ವಲಯಗಳಿಗೆ ಸಂಬಂಧಿಸಿದಂತೆ ಇರುವ ಕೊರೋನಾ ವಾರ್ ರೂಂಗಳ ಜವಾಬ್ದಾರಿ ಹೊತ್ತ ಹಿರಿಯ ಐಎಎಸ್ ಅಧಿಕಾರಿಗಳು, ಹಿರಿಯ ಬಿಬಿಎಂಪಿ ಅಧಿಕಾರಿಗಳು ಆಡಳಿತ ಮಂಡಳಿಯ ಕೊರೋನಾ ಸೋಂಕಿತರಿಗೆ ಹಾಸಿಗೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಗಳನ್ನು 100 ಗಂಟೆಗಳ ಒಳಗಾಗಿ ಬಗೆಹರಿಸಿದರು.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಇತ್ತೀಚಿನ ಕೆಲ ದಿನಗಳ ಹಿಂದಷ್ಟೇ ಕೊರೋನಾ ಸೋಂಕಿತರಿಗೆ ಬೆಡ್ ಹಂಚಿಕೆಗೆ ಸಂಬಂಧಿಸಿದಂತೆ ಬಿಬಿಎಂಪಿ ವಾರ್ ರೂಂಗಳಲ್ಲಿ ನಡೆಯುತ್ತಿದ್ದ ಅಕ್ರಮ ಕರ್ಮಕಾಂಡಗಳನ್ನು ಬಯಲಿಗೆಳೆದಿದ್ದರು. ಆ ಬಳಿಕದ ಬೆಳವಣಿಗೆಯಾಗಿ ಇದೀಗ ಬೆಡ್ ಹಂಚಿಕೆಯಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಆ ಬಳಿಕ ಟ್ವಿಟ್ಟರ್ ಬಳಸಿ ಈ ಸಾಫ್ಟ್ವೇರ್ ಅಭಿವೃದ್ಧಿ ಮಾಡುವಂತೆ ನಂದನ್ ನಿಲೇಕಣಿ ಅವರಿಗೂ ತೇಜಸ್ವಿ ಸೂರ್ಯ ಮನವಿ ಮಾಡಿದ್ದರು.
ಕೋವಿಡ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ನಂದನ್ ನಿಲೇಕಣಿ ನೇತೃತ್ವದ ಸಾಫ್ಟ್ವೇರ್ Product think tank ispirit ಮತ್ತು eGov foundation ನ ಸ್ವಯಂಸೇವಕರ ನೇಮಕವನ್ನು ಮಾಡಲಾಗಿದೆ. ಈ ತಂಡದಲ್ಲಿ ಪೇಪಾಲ್ನ ಹಿರಿಯ ಸಾಫ್ಟ್ವೇರ್ ಎಂಜಿನಿಯರ್ ಐಶ್ವರ್ಯ ಶಂಕರ ವಡಿವೇಲ್, ಗಣೇಶನ್ ರವಿಚಂದ್ರನ್, ಪ್ರವೀಣ್ ಕುಮಾರ್, ಸೈಬ್ರಿಲಾ ಸಂಸ್ಥೆಯ ಸತೀಶ್ ಪರೇಲಾ, ಐಸ್ಪಿರಿಟ್ನ ಸುಧಾಂಶು ಶೇಖರ್ ಭಾಗವಹಿಸಿದ್ದರು.
ಸಿಎಚ್ಬಿಎಂಎಸ್ ಅನ್ನು ಏಕೀಕೃತ ಡ್ಯಾಶ್ಬೋರ್ಡ್ ಆಗಿ ಪರಿವರ್ತನೆ ಮಾಡುವುದು, ಇದರಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಹಾಸಿಗೆ ಸೇರಿದಂತೆ ಇನ್ನಿತರ ಮಾಹಿತಿಗಳು ದೊರೆಯುವಂತೆ ಮಾಡುವ ದೃಷ್ಟಿಯಿಂದ ಈ ಸಾಫ್ಟ್ವೇರ್ ಅಭಿವೃದ್ಧಿ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.