ಬೆಂಗಳೂರು: ರಾಜ್ಯದಲ್ಲಿ ವಿಕಲಚೇತನರಿಗೆ ಕೊರೋನಾ ವ್ಯಾಕ್ಸಿನ್ ನೀಡುವುದರ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಬೆಂಗಳೂರು, ರಾಜ್ಯದ ಎಲ್ಲಾ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗಳು, ಎಲ್ಲಾ ಜಿಲ್ಲೆಯ ಆರ್ಸಿಎಚ್ ಅಧಿಕಾರಿಗಳು, ಬಿಬಿಎಂಪಿ ಲಸಿಕಾ ಅಧಿಕಾರಿಗಳಿಗೆ
ರಾಜ್ಯದ ಹೈಕೋರ್ಟ್ ಈ ಸಂಬಂಧ ಈ ಹಿಂದೆಯೇ ಆದೇಶ ನೀಡಿದ್ದು, ವಿಕಲಚೇತನರಾದ 18 ವರ್ಷ ಮೇಲ್ಪಟ್ಟವರಿಗೆ ಮತ್ತು ಅವರ ಆರೈಕೆದಾರರಿಗೆ ಕೊರೋನಾ ಲಸಿಕೆ ನೀಡಲು ಸೂಚಿಸಿರುತ್ತಾರೆ. ಹಾಗೆಯೇ ಅದರ ವಸ್ತುಸ್ಥಿತಿ ವರದಿಯನ್ನು 12 ಮೇ ಒಳಗಾಗಿ ಸಲ್ಲಿಕೆ ಮಾಡುವಂತೆಯೂ ಸೂಚಿಸಿರುವುದಾಗಿ ತಿಳಿಸಿದೆ.
ಇದಕ್ಕನುಗುಣವಾಗಿ ರಾಜ್ಯದಲ್ಲಿ ಎ. 1 ರಿಂದಲೇ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಜೊತೆಗೆ 45 ವರ್ಷ ಮೇಲ್ಪಟ್ಟ ಲಸಿಕೆ ಪಡೆಯದ ವಿಕಲಚೇತನ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆಯುವುದು, ಅವರಿಗೆ ಸುಲಭವಾಗಿ ಲಸಿಕೆ ನೀಡಬಹುದಾದ ಲಸಿಕಾ ಕೇಂದ್ರಗಳನ್ನು ಪಟ್ಟಿ ಮಾಡುವುದು, ಜೊತೆಗೆ ಅವರಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ. ಹಾಗೆಯೇ ಅವರಿಗೆ ಮೊದಲೇ ಲಸಿಕೆ ನೀಡಲಾಗುವ ಸ್ಥಳ ದಿನಾಂಕಗಳ ಬಗ್ಗೆ ಮಾಹಿತಿ ನೀಡುವಂತೆಯೂ ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
18 – 44 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಲಸಿಕೆ ನೀಡಿಕೆಯ ಸಂಬಂಧ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
ಅಂಗವಿಕಲರಿಗೆ ಕೋವಿಡ್-19 ಲಸಿಕಾಕರಣ ನಡೆಸುವ ಕುರಿತು@WFRising @citizenkamran @BangaloreBuzz @KarnatakaVarthe@PIBBengaluru @RCBTweets @NammaKarnataka_@ADinfodeptBIDAR @MangaloreCity @allaboutbelgaum @mysuruvarthe@MysuruMemes @Kalaburgivarthe@Hubballi_Infra pic.twitter.com/BWCaVCJ1R1
— K'taka Health Dept (@DHFWKA) May 12, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.