ಬೆಂಗಳೂರು: ನಗರದ ಗ್ರೀನ್ವುಡ್ ಹೈ ಇಂಟರ್ನ್ಯಾಷನಲ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಸ್ನೇಹ ರಾಘವನ್ ಮತ್ತು ಶ್ಲೋಕ ಅಶೋಕ್ ಕೇವಲ 24 ಗಂಟೆಗಳಲ್ಲಿ 2 ಲಕ್ಷ ರೂ. ಗಳನ್ನು ಸಂಗ್ರಹಿಸಿ 300 ಪಲ್ಸ್ ಆಕ್ಸಿಮೀಟರ್ಗಳನ್ನು ಅಶಕ್ತರ ನೆರವಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಈ ನೆರವಿನ ಹಸ್ತವನ್ನು ‘ಸಂಪರ್ಕ’ ಎಂಬ ಸ್ವಯಂಸೇವಾ ಸಂಸ್ಥೆಯೊಂದಕ್ಕೆ ಮಕ್ಕಳು ತಲುಪಿಸಿದ್ದಾರೆ. ಇದನ್ನು ಎನ್ಜಿಒ ಬೆಂಗಳೂರಿನ ಕೊಳೆಗೇರಿ ನಿವಾಸಿಗಳಿಗೆ ಮತ್ತು ಉತ್ತರ ಕರ್ನಾಟಕದ ಕೊಪ್ಪಳದ ಗ್ರಾಮೀಣ ಮಹಿಳೆಯರಿಗೆ ವಿತರಣೆ ಮಾಡಲಿದೆ.
ಇನ್ನು ಈ ನಿಧಿ ಸಂಗ್ರಹ ಕಾರ್ಯಕ್ಕೆ ಈ ಇಬ್ಬರೂ ಮಕ್ಕಳು ಪೋಸ್ಟರ್ಗಳನ್ನು ವಿನ್ಯಾಸಗೊಳಿಸಿದ್ದಾರೆ. ಜೊತೆಗೆ ಈ ಕಾರ್ಯ ಸಫಲವಾಗಲು ವಿವಿಧ ಆಕ್ಸಿಮೀಟರ್ಗಳನ್ನು ತಯಾರಿಸುವವರ ಜೊತೆಗೂ ಮಾತನಾಡಿದ್ದಾರೆ. ಬಳಿಕ 2 ಲಕ್ಷ ರೂ. ಗಳ 300 ಆಕ್ಸಿಮೀಟರ್ಗಳನ್ನು ಖರೀದಿಸಿ ಬಡವರಿಗೆ ತಲುಪಿಸುವಂತೆ ಅದನ್ನು ಎನ್ಜಿಒಗೆ ಹಸ್ತಾಂತರ ಮಾಡುವ ಕೆಲಸವನ್ನು ಮಾಡಿದ್ದಾರೆ.
ಈ ಸಂಬಂಧ ಮಾತನಾಡಿರುವ ಸ್ನೇಹಾ ರಾಘವನ್, ತಮ್ಮ ಈ ಕಾರ್ಯಯೋಜನೆಯ ಬಗ್ಗೆ ಮಾತನಾಡಲು ಸಾಮಾಜಿಕ ಕಾರ್ಯಕರ್ತೆ ಅನುಪಮಾ ಪರೇಖ್ ಎಂಬವರನ್ನು ಸಂಪರ್ಕಿಸಿದ್ದು, ಅವರು ಈ ಯೋಜನೆಗೆ ಕೈ ಜೋಡಿಸಲು ಮುಂದಾಗುವರೇ ಎಂದು ಕೇಳಿಕೊಳ್ಳಲಾಗಿತ್ತು. ಅಲ್ಲದೆ ಅವರ ಸಲಹೆ ಸೂಚನೆಗಳನ್ನು ಸಹ ಪಡೆದುಕೊಂಡು ಆಕ್ಸಿಮೀಟರ್ಗಳನ್ನು ವಿತರಿಸುವ ನಿರ್ಧಾರ ಕೈಗೊಳ್ಳಲಾಯಿತು. ಈ ಕೆಲಸಕ್ಕೆ ಸಾರ್ವಜನಿಕ ವಲಯದಿಂದ ಪ್ರೋತ್ಸಾಹ ದೊರೆಯುತ್ತಿದೆ. ಅವರ ಬೆಂಬಲದಿಂದಲೇ ನಾವಿದನ್ನು ಸಾಧಿಸಿದ್ದೇವೆ. ಆ ಎಲ್ಲಾ ದಾನಿಗಳಿಗೂ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ನಮ್ಮ ಪರೀಕ್ಷೆಗಳು ನಡೆದಿಲ್ಲ. ಈ ಸಮಯವನ್ನು ನಾವು ಸಾಮಾಜಿಕ ಕೆಲಸಗಳಿಗೆ ಬಳಕೆ ಮಾಡಿಕೊಂಡಿದ್ದೇವೆ. ಸದ್ಯ ಕೊರೋನಾ ಸಾಂಕ್ರಾಮಿಕ ಮತ್ತು ವ್ಯಾಕ್ಸಿನೇಷನ್ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೋಸ್ಟರ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದೇವೆ. ಇದು ಈ ಕ್ಷಣದ ಅಗತ್ಯತೆಯಾಗಿದೆ ಎಂದು ಶ್ಲೋಕಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.