ಹೀರತ್: ಯುದ್ಧಪೀಡಿತ ಅಫ್ಘಾನಿಸ್ಥಾನದ ಹೇರತ್ ಪ್ರದೇಶದಲ್ಲಿ ಭಾರತ ಕೈಗೊಂಡಿರುವ ಸಲ್ಮಾ ಡ್ಯಾಂ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2006ರಲ್ಲಿ ಭಾರತ ಈ ಯೋಜನೆಯನ್ನು ಆರಂಭಿಸಿತ್ತು.
ಡ್ಯಾಂ ನಿರ್ಮಾಣ ಪೂರ್ಣಗೊಂಡಿರುವುದರಿಂದ ಸಂತೋಷಗೊಂಡಿರುವ ಅಫ್ಘಾನ್ ಜನತೆ ಅಫ್ಘಾನ್ ಬಾವುಟದೊಂದಿಗೆ 100 ಮೀ ಉದ್ದದ ಭಾರತದ ಬಾವುಟವನ್ನು ಹಿಡಿದು ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಭಾರತೀಯ ರಾಯಭಾರ ಕಛೇರಿಗೆ ತೆರಳಿ ಅಲ್ಲಿನ ಸಿಬ್ಬಂದಿಗಳಿಗೆ ಹೂವನ್ನು ನೀಡಿ ಭಾವುಕರಾಗಿ ಧನ್ಯವಾದಗಳು ಸಮರ್ಪಿಸಿದ್ದಾರೆ, ಗೌರವಿಸಿದ್ದಾರೆ.
ಹಲವಾರು ಮಂದಿ ಟ್ವಿಟರ್ ಮೂಲಕ ಭಾರತಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
300 ಮಿಲಿಯನ್ ಡಾಲರ್ ಮೊತ್ತದ ಯೋಜನೆ ಇದಾಗಿದ್ದು, ಇದು 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ ಮತ್ತು 80 ಸಾವಿರ ಹೆಕ್ಟೆರ್ ಪ್ರದೇಶಕ್ಕೆ ನೀರು ನೀಡಲಿದೆ. ಇನ್ನು 9-12 ತಿಂಗಳಲ್ಲಿ ಇದು ಕಾರ್ಯವನ್ನು ಆರಂಭಿಸಲಿದೆ.
ಭಾರತ ತಮಗೆ ಮಾಡಿರುವ ಉಪಕಾರವನ್ನು ಪ್ರಶಂಸಿಸಿರುವ ಅಲ್ಲಿನ ಜನತೆ ಭಾರತದ ಧ್ವಜವನ್ನು ಹಿಡಿದು ಬಾಲಿವುಡ್ ಗೀತೆಗಳನ್ನು ಹಾಡುತ್ತಾ ಮೆರವಣಿಗೆ ಮೂಲಕ ಭಾರತದ ರಾಯಭಾರ ಕಛೇರಿಗೆ ತೆರಳಿ ಅಲ್ಲಿದ್ದವರಿಗೆ ಗುಲಾಬಿ ಹೂವನ್ನು ನೀಡಿದ್ದಾರೆ. ಇದು ಎರಡು ದೇಶಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.