ನವದೆಹಲಿ: ಪಾಕಿಸ್ಥಾನದಿಂದ ಭಾರತದೊಳಕ್ಕೆ ನುಸುಳಿ ಬಂದು, ಇಲ್ಲಿನ ಅನೇಕ ಪ್ರದೇಶಗಳಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುವುದಕ್ಕೆ ಸಂಚು ಹೂಡಿ, ಹೊಂಚು ಹಾಕುತ್ತಿದ್ದ ಉಗ್ರಗಾಮಿಯೋರ್ವನನ್ನು ಎನ್ಐಎ ವಿಶೇಷ ನ್ಯಾಯಾಲಯ ಎಲ್ಇಟಿ ಉಗ್ರನೊಬ್ಬನಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.
ನೆರೆಯ ರಾಷ್ಟ್ರ ಪಾಕಿಸ್ಥಾನದ ಲಷ್ಕರ್ ಎ ತೈಬಾ ಉಗ್ರ ಸಂಘಟನೆಯ ಉಗ್ರಗಾಮಿ ಬಹದ್ದೂರ್ ಆಲಿ ವಿರುದ್ಧ ಈ ಆರೋಪ ಸಾಬೀತಾಗಿದ್ದು, ಪಟಿಯಾಲ ಹೌಸ್ ಕೋರ್ಟ್ನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಆತನಿಗೆ 10 ವರ್ಷಗಳ ಸೆರೆವಾಸದ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.
ಈತ 2016 ರಲ್ಲಿ ಭಾರತದ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ಇನ್ನೂ ಹಲವು ಪ್ರದೇಶಗಳಲ್ಲಿ ದಾಳಿ ನಡೆಸುವ ನಿಟ್ಟಿನಲ್ಲಿ ಸಂಚು ಹೂಡಿದ್ದ. ತನ್ನ ಸಹಚರರಾದ ಅಬು ಸಾದ್ ಮತ್ತು ಅಬು ದರ್ದಾ ಜೊತೆಗೂಡಿ ಕಾಶ್ಮೀರ ಗಡಿಯಲ್ಲಿ ನುಸುಳಿ ಭಾರತವನ್ನು ಪ್ರವೇಶಿಸಿದ್ದರು. ಈ ಘಟನೆಯಲ್ಲಿ ಕುಪ್ವಾರಾ ಜಿಲ್ಲೆಯಲ್ಲಿ ಬಹದ್ದೂರ್ ಆಲಿಯನ್ನು ವಶಕ್ಕೆ ಪಡೆಯಲಾಗಿತ್ತು. ಈತನ ವಿರುದ್ಧ 2017 ರಲ್ಲಿ ಆರೋಪ ಪಟ್ಟಿಯನ್ನೂ ಸಲ್ಲಿಕೆ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.