ತುಮಕೂರು: ಸಾಮಾನ್ಯ ಮರಗಳಿಗಿಂತಲೂ ಹೆಚ್ಚಿನ ಇಳುವರಿ ನೀಡುವ ಉತ್ಕೃಷ್ಟ ರುಚಿ, ಗಾತ್ರ, ಬಣ್ಣ ಹೊಂದಿರುವ ವಿನೂತನ ತಳಿಯ ಹುಣಸೇ ಮರವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ಗುರುತಿಸಿದ್ದು, ಆ ತಳಿಗೆ ರೈತನ ಹೆಸರನ್ನೇ ನಾಮಕರಣ ಮಾಡಿದ್ದಾರೆ.
ತುಮಕೂರು ತಾಲೂಕು ನಂದಿಹಳ್ಳಿಯ ರೈತ ಲಕ್ಷ್ಮಣ ಎಂಬುವವರು 40 ವರ್ಷಗಳ ಹಿಂದೆ ನೆರೆಯ ಗ್ರಾಮದಿಂದ ತಂದು ಬಿತ್ತನೆ ಮಾಡಿದ ಹುಣಸೇ ಬೀಜ ಇಂದು ಬೃಹದಾಕಾರವಾಗಿ ಬೆಳೆದು, ಉತ್ತಮ ಫಸಲು ನೀಡುತ್ತಿದೆ. ಸಾಮಾನ್ಯ ಮರಗಳು ಒಂದೂವರೆ ಕ್ವಿಂಟಾಲ್ ಇಳುವರಿ ನೀಡಿದರೆ, ಈ ಮರ ಎರಡೂವರೆ ಕ್ವಿಂಟಾಲ್ ಇಳುವರಿ ನೀಡುತ್ತಿದೆ.
ಹಣ್ಣಿನ ಗಾತ್ರ ಮತ್ತು ಹುಳಿಯ ಪ್ರಮಾಣ ಉತ್ಕೃಷ್ಟವಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕೂಡ ಹೆಚ್ಚಿದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನ ಡಾ. ಜಿ. ಕರುಣಾಕರನ್ ಅವರು ಕಳೆದ ನಾಲ್ಕು ವರ್ಷಗಳಿಂದ ಈ ಮರದ ಕುರಿತು ಅಧ್ಯಯನ ನಡೆಸಿದ್ದಾರೆ. ನಿರಂತರವಾಗಿ ಒಂದೇ ಸಮಾನಾದ ಇಳುವರಿ ನೀಡುತ್ತಿದೆ. ಕಡಿಮೆ ನೀರಿನಲ್ಲಿ ಹುಲುಸಾಗಿ ಬೆಳೆಯುವ ಗುಣ ಹೊಂದಿದೆ. ಹೀಗಾಗಿ ಹುಣಸೇಹಣ್ಣಿಗೆ ಲಕ್ಷ್ಮಣ ತಳಿಯೆಂದೇ ನಾಮಕರಣ ಮಾಡಿದ್ದಾರೆ.
ಮಳೆಯಾಶ್ರಿತ ಪ್ರದೇಶಗಳಲ್ಲಿನ ರೈತರಿಗೆ ಈ ರೀತಿ ತಳಿಗಳು ಹೆಚ್ಚು ಲಾಭ ತಂದುಕೊಡುತ್ತವೆ. ತಮಿಳುನಾಡು, ದುಬೈ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಈ ಹುಣಸೇ ಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಡಿಡಿನ್ಯೂಸ್ ನೊಂದಿಗೆ ರೈತ ಲಕ್ಷ್ಮಣಪ್ಪ, ಈ ಹುಣಸೇ ಮರ ಒಳ್ಳೆಯ ಫಸಲು ನೀಡುತ್ತಿದ್ದು, ವಿಜ್ಞಾನಿಗಳು ನೂತನ ತಳಿಗೆ ತಮ್ಮ ಹೆಸರನ್ನೇ ನಾಮಕರಣ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ವಿಜ್ಞಾನಿ ಡಾ. ಕರುಣಾಕರನ್, ಸಾಕಷ್ಟು ಪೌಷ್ಟಕಾಂಶಗಳನ್ನು ಹೊಂದಿರುವ ಈ ತಳಿಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಎಂ. ಆರ್. ದಿನೇಶ್ ಅವರು ಲಕ್ಷ್ಮಣ ತಳಿ ಎಂದು ನಾಮಕರಣ ಮಾಡಿದ್ದಾರೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.