ಶ್ರೀನಗರ: ಜಮ್ಮು ಕಾಶ್ಮೀರದ ಉಧಮ್ಪುರದಲ್ಲಿ ಇತ್ತೀಚಿಗೆ ಸೆರೆಸಿಕ್ಕಿರುವ ಉಗ್ರ ಮೊಹಮ್ಮದ್ ನಾವೇದ್ನನ್ನು ನ್ಯಾಯಾಲಯ 14 ದಿನಗಳ ಕಾಲ ವಿಚಾರಣೆಗಾಗಿ ಎನ್ಐಎ ವಶಕ್ಕೆ ನೀಡಿದೆ.
ಈಗಾಗಲೇ ಆತನ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗೆ ಕಾಲಾವಕಾಶ ಕೋರಲಾದ ಹಿನ್ನಲೆಯಲ್ಲಿ ಎನ್ಐಎ ವಶಕ್ಕೆ ನೀಡಿಲಾಗಿದೆ.
ನಾವೆದ್ ಮತ್ತು ಆತನ ಸಹಚರರು ಹಲವು ದಿನಗಳ ಹಿಂದೆ ಭಾರತಕ್ಕೆ ಆಗಮಿಸಿದ್ದರು, ಇವರಿಗೆ ಕಾಶ್ಮೀರದ ಉದ್ಯಮಿಯೊಬ್ಬ 5 ಲಕ್ಷ ನೆರವು ನೀಡಿದ್ದ ಎನ್ನಲಾಗಿದ್ದು, ಇದೀಗ ಆ ಉದ್ಯಮಿಯ ಬಂಧನಕ್ಕೆ ಬಲೆ ಬೀಸಲಾಗಿದೆ.
ನಾವೆದ್ ನೀಡಿರುವ ಮಾಹಿತಿಯನ್ನು ಆಧರಿಸಿ ಪೊಲೀಸರು ಒಟ್ಟು 11 ಮಂದಿಯ ಮೇಲೆ ಕಣ್ಣಿಟ್ಟಿದ್ದಾರೆ. ಇವರನ್ನು ಶೀಘ್ರದಲ್ಲೇ ತನಿಖೆಗೊಳಪಡಿಸುವ ಸಾಧ್ಯತೆ ಇದೆ. ಲಷ್ಕರ್ ಸಂಘಟನೆಯ ಸಹಾಯದೊಂದಿಗೆ ದಾಳಿ ನಡೆಸುವ ಸಲುವಾಗಿ ಇವರು ಭಾರತಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.