ಬೆಂಗಳೂರು: ನಗರದ ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಸಂಸ್ಥೆಯು ಪ್ಲಾಸ್ಟಿಕ್ ಮತ್ತು ಬಟ್ಟೆ ಚೀಲಗಳಿಗೆ ಪರ್ಯಾಯವಾಗಿ, ಮಣ್ಣು ಮತ್ತು ಬಿಸಿ ನೀರಿನಲ್ಲಿ ಕರಗಬಲ್ಲ ಉತ್ಪನ್ನಗಳನ್ನು ತಯಾರಿಸಿದ್ದು, ಇವುಗಳನ್ನು ಬೆಂಗಳೂರಿನ ಮಾರುಕಟ್ಟೆಗೆ ಪರಿಚಯಿಸಲಾಗಿದೆ.
ಎನ್ವಿಗ್ರೀನ್ ಬಯೋಟೆಕ್ನ ನೂತನ ಕಚೇರಿಯನ್ನು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಉದ್ಘಾಟಿಸಿದರು. ಉತ್ಪನ್ನಗಳನ್ನು ಸಚಿವ ಸೋಮಶೇಖರ್ ಬಿಡುಗಡೆ ಮಾಡಿದರು.
ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಸಂಸ್ಥೆ ಸಂಪೂರ್ಣ ಪರಿಸರಸ್ನೇಹಿ, 100% ಸಾವಯವ, ಜೈವಿಕ ತ್ಯಾಜ್ಯ ಬಳಸಿ ಕೈಚೀಲಗಳನ್ನು ತಯಾರಿಸಿದೆ. ಇದು ನೋಡುವುದಕ್ಕೆ ಪ್ಲಾಸ್ಟಿಕ್ ಚೀಲದಂತೆಯೇ ಹೋಲಿಕೆ ಇದ್ದು, ನೈಸರ್ಗಿಕ ಪಿಷ್ಟ ಮತ್ತು ಸಸ್ಯ ಜನ್ಯ ಉತ್ಪನ್ನಗಳಿಂದ ಆವಿಷ್ಕಾರ ಮಾಡಲಾಗಿದೆ. ಅರ್ಧ ಕೆಜಿ ಇಂದ 15 ಕೆಜಿ ವರೆಗಿನ ಭಾರವನ್ನು ತಡೆದುಕೊಳ್ಳುವ ಶಕ್ತಿಯನ್ನು ಈ ಚೀಲಗಳು ಹೊಂದಿವೆ.
ಈ ಚೀಲಗಳು ಮಣ್ಣು ಮತ್ತು ಬಿಸಿನೀರಿನಲ್ಲಿ ಕರಗುವುದರಿಂದ ಪರಿಸರದ ಮೇಲೆಯೂ ದುಷ್ಪರಿಣಾಮ ಬೀರುವುದಿಲ್ಲ. ಈ ಕೈಚೀಲಗಳನ್ನು ಗೊಬ್ಬರವಾಗಿಯೂ ಬಳಕೆ ಮಾಡಲಾಗುವುದು. ಈ ಪರಿಸರಸ್ನೇಹಿ ಕೈಚೀಲಗಳು ಸೇರಿದಂತೆ ಇತರೆ ಉತ್ಪನ್ನಗಳಿಗಾಗಿ ‘ಅಶ್ವತ್ಥ್ ಹೆಗ್ಡೆ, ವ್ಯವಸ್ಥಾಪಕ ನಿರ್ದೇಶಕ, ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈ. ಲಿ., ಎಂ ಜಿ ರಸ್ತೆ ಬೆಂಗಳೂರು’ ಮೊಬೈಲ್: 9686558866, ಇ ಮೇಲ್: sales@envigreen.in ಸಂಪರ್ಕಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.