ಮಂಗಳೂರು: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿಬಿ) ನೊಂದಿಗೆ ಜೀವ ವಿಮೆಗೆ ಸಂಬಂಧಿಸಿ ಒಡಂಬಡಿಕೆ ಮಾಡಿಕೊಂಡಿರುವ ಕೆನರಾ ಎಚ್ಎಸ್ಬಿಸಿ ಜೀವ ವಿಮಾ ಕಂಪನಿಯು, ಖಾತರಿಯ ಆದಾಯ ಯೋಜನೆಯೊಂದಿಗೆ ಪ್ರಥಮ ಪ್ರೀಮಿಯಮ್ ಕಂತಿನ 11 ಪಟ್ಟು ಜೀವ ವಿಮೆ ಒದಗಿಸುವ, ನೂತನ ವಿಮಾ ಯೋಜನೆಯನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ.
ಈ ಯೋಜನೆಯನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಪಿ ಗೋಪಿ ಕೃಷ್ಣ ಬಿಡುಗಡೆ ಮಾಡಿ ಮಾತನಾಡಿ, ಹೊಸ ವಿಮಾ ಯೋಜನೆಯನ್ನು ಅವಲಂಬಿಸಿ 15 ರಿಂದ 22 ವರ್ಷದ ವರೆಗೆ ನಿರಂತರ ಆದಾಯ ಒದಗಿಸಲಿದ್ದು ದೀರ್ಘಾವಧಿಯ ಮತ್ತು ಅಲ್ಪಾವಧಿಯ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅನುರೂಪವಾಗಿದೆ ಎಂದರು.
ಕೆನರಾ ಎಚ್ಎಸ್ಬಿಸಿ ಜೀವ ವಿಮಾ ನಿಗಮದ ಪ್ರಾದೇಶಿಕ ಮುಖ್ಯಸ್ಥ ರಾಘವೇಂದ್ರ ಕಲಕರ್ಣಿ ಮಾತನಾಡಿ ಈ ನೂತನ ಪಾಲಿಸಿಯಡಿಯಲ್ಲಿ ಪ್ರವೇಶದ ಮಿತಿಯನ್ನು 3 ರಿಂದ 65 ವರ್ಷಗಳಿಗೆ ನಿಗದಿಪಡಿಸಲಾಗಿದ್ದು ಖಚಿತವಾದ ಸ್ಥಿರ ಆದಾಯವಿರುತ್ತದೆ. ಆದಾಯ ತೆರಿಗೆ ಪಾವತಿದಾರರಿಗೆ 80 ಸಿ ಮತ್ತು 10 (10) ಡಿ ಎರಡೂ ಪರಿಚ್ಛೇಧದ ಅಡಿಯಲ್ಲಿ ರಿಯಾಯತಿ ದೊರೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಮಹಾಪ್ರಬಂಧಕರಾದ ಬಿಸಿ ರವಿಚಂದ್ರ, ಚಂದ್ರಶೇಖರ ಮೋರೋ, ವಿಮಾ ಕಂಪನಿಯ ತರಬೇತಿ ವ್ಯವಸ್ಥಾಪಕ ರಾಘವೇಂದ್ರ ಕುಲಕರ್ಣಿ, ಎಸ್ ಎಸ್ ಮನ್ನೂರ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.