ನವದೆಹಲಿ: ದೇಶದಲ್ಲಿ ಮಾರ್ಚ್ 2014-ಜುಲೈ 2015ರ ನಡುವೆ ಹೊಸದಾಗಿ 239 ರಾಜಕೀಯ ಪಕ್ಷಗಳು ತಮ್ಮ ಹೆಸರನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿವೆ. ಹೀಗಾಗಿ ದೇಶದ ಪಕ್ಷಗಳ ಸಂಖ್ಯೆ 1,866ಕ್ಕೆ ಏರಿಕೆಯಾಗಿದೆ.
ಇವುಗಳಲ್ಲಿ 56 ಪಕ್ಷಗಳು ರಾಷ್ಟ್ರೀಯ ಅಥವಾ ರಾಜ್ಯಮಟ್ಟದಲ್ಲಿ ಮಾನ್ಯತೆಯನ್ನು ಪಡೆದ ಅಥವಾ ಗುರುತಿಸಲ್ಪಟ್ಟಿರುವ ಪಕ್ಷಗಳು. ಉಳಿದವುಗಳು ಮಾನ್ಯತೆ ಪಡೆಯದ ಆದರೆ ನೋಂದಾಯಿತ ಪಕ್ಷಗಳಾಗಿವೆ.
2014ರ ಚುನಾವಣೆಯಲ್ಲಿ 464 ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ಮಾಹಿತಿಯನ್ನು ಕಾನೂನು ಸಚಿವಾಲಯಲ್ಲಿ ಸಂಸತ್ತಿನಲ್ಲಿ ಹಂಚಿಕೊಂಡಿದೆ.
2014ರ ಮಾರ್ಚ್ 10ರವರೆಗೆ 1,593 ಪಕ್ಷಗಳಿದ್ದವು, ಮಾರ್ಚ್ 11ರಿಂದ 12ರ ನಡುವೆ 24 ಪಕ್ಷಗಳು ನೋಂದಾಯಿತಗೊಂಡವು. ಮಾರ್ಚ್ 26ರೊಳಗೆ ಮತ್ತೆ 10 ಪಕ್ಷಗಳು ನೋಂದಾಯಿತವಾದವು. ಈ ರೀತಿ ಒಟ್ಟು 239 ಪಕ್ಷಗಳು ಹೊಸದಾಗಿ ಸೇರ್ಪಡೆಗೊಂಡವು.
ಸತತ ಐದು ವರ್ಷಗಳ ಕಾಲ ಚಟುವಟಿಕೆಯಿಂದ ಇದ್ದು, ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಶೇ.4ರಷ್ಟು ಮತಗಳಿಸಿದರೆ ಮಾತ್ರ ಇವುಗಳ ಮಾನ್ಯತೆ ದೊರಕುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.