ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ (ಎಚ್ಎಲ್ಸಿ)ಯು ಐದು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಡಿ 3,113 ಕೋಟಿ ರೂಪಾಯಿಗಳ ಹೆಚ್ಚುವರಿ ಕೇಂದ್ರ ಸಹಾಯವನ್ನು ಅನುಮೋದಿಸಿದೆ.
ನೈರುತ್ಯ ಮಾನ್ಸೂನ್ 2020 ರ ಸಮಯದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಬಿಹಾರಕ್ಕೆ 1,255 ಕೋಟಿ ರೂಪಾಯಿ ಮತ್ತು ಆಂಧ್ರಪ್ರದೇಶಕ್ಕೆ 280 ಕೋಟಿ ರೂಪಾಯಿಗಳನ್ನು ಉನ್ನತ ಮಟ್ಟದ ಸಮಿತಿ ಅನುಮೋದಿಸಿದೆ. ಬುರೆವಿ ಮತ್ತು ನಿವಾರ್ ಚಂಡಮಾರುತಗಳಿಂದ ಹಾನಿಗೊಳಗಾದ ತಮಿಳುನಾಡಿಗೆ ಸುಮಾರು 287 ಕೋಟಿ ರೂಪಾಯಿಗಳನ್ನು ಅನುಮೋದಿಸಲಾಗಿದೆ.
ನಿವಾರ್ ಚಂಡಮಾರುತದಿಂದ ಹಾನಿಗೊಳಗಾದ ಪುದುಚೇರಿಯ ಕೇಂದ್ರಾಡಳಿತ ಪ್ರದೇಶಕ್ಕೆ ಸುಮಾರು 10 ಕೋಟಿ ರೂಪಾಯಿಗಳನ್ನು ಅನುಮೋದಿಸಲಾಗಿದೆ. ಖಾರಿಫ್ -2020 ರ ಅವಧಿಯಲ್ಲಿ ಕೀಟ ದಾಳಿಗೆ ಒಳಗಾದ ಮಧ್ಯಪ್ರದೇಶಕ್ಕೆ 1,280 ಕೋಟಿ ರೂಪಾಯಿಗಳನ್ನು ಉನ್ನತ ಮಟ್ಟದ ಸಮಿತಿ ಅನುಮೋದಿಸಿದೆ.
ಹೆಚ್ಚುವರಿ ಕೇಂದ್ರ ಸಹಾಯವನ್ನು ಅನುಮೋದಿಸಿದ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ, “ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಈ ನೈಸರ್ಗಿಕ ವಿಕೋಪಗಳನ್ನು ಧೈರ್ಯದಿಂದ ಎದುರಿಸಿದ ಆಂಧ್ರಪ್ರದೇಶ, ಬಿಹಾರ, ತಮಿಳುನಾಡು, ಪುದುಚೇರಿ ಮತ್ತು ಮಧ್ಯಪ್ರದೇಶದ ಜನರಿಗೆ ಸಹಾಯ ಮಾಡಲು ಬದ್ಧವಾಗಿದೆ” ಎಂದು ಹೇಳಿದರು.
ಪೀಡಿತ ರಾಜ್ಯ ಸರ್ಕಾರಗಳಿಂದ ಜ್ಞಾಪಕ ಪತ್ರವನ್ನು ಸ್ವೀಕರಿಸಲು ಕಾಯದೆ ವಿಪತ್ತು ಸಂಭವಿಸಿದ ಕೂಡಲೇ ಕೇಂದ್ರ ಸರ್ಕಾರವು ಅಂತರ ಸಚಿವಾಲಯದ ಕೇಂದ್ರ ತಂಡಗಳನ್ನು ನಿಯೋಜಿಸಿತ್ತು.
ಇದರ ಜೊತೆಗೆ ಕೇಂದ್ರವು 2020-21ರ ಆರ್ಥಿಕ ವರ್ಷದಲ್ಲಿ 19 ಸಾವಿರ 36 ಕೋಟಿ ರೂಪಾಯಿಗಳನ್ನು 28 ರಾಜ್ಯಗಳಿಗೆ ಬಿಡುಗಡೆ ಮಾಡಿದೆ, ಇಲ್ಲಿಯವರೆಗೆ, ರಾಜ್ಯ ವಿಪತ್ತು ಅಪಾಯ ನಿರ್ವಹಣಾ ನಿಧಿಯಿಂದ ಮತ್ತು 4 ಸಾವಿರದ 4 ನೂರು ಮತ್ತು 9 ಕೋಟಿ ರೂಪಾಯಿಗಳನ್ನು 11 ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಅಪಾಯ ನಿರ್ವಹಣಾ ನಿಧಿಯಿಂದ ಬಿಡುಗಡೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.