ವ್ಯಾಂಕೋವರ್ : ಕೆನಡಾದಲ್ಲಿನ ಅನಿವಾಸಿ ಭಾರತೀಯರು ಶನಿವಾರ ‘ತಿರಂಗಾ ರ್ಯಾಲಿ’ ನಡೆಸಿದ್ದಾರೆ. ಇದರಲ್ಲಿ ಭಾರತೀಯ ಮತ್ತು ಕೆನಡಾದ ಧ್ವಜಗಳನ್ನು ಹಿಡಿದು ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಅಪಾರ ಜನರು ಮಾತ್ರವಲ್ಲದೆ, ಸುಮಾರು 350 ಕಾರುಗಳು ಯಾತ್ರೆಯಲ್ಲಿ ಭಾಗವಹಿಸಿದ್ದವು.
”ವಂದೇ ಮಾತರಂ’, ‘ಜೈ ಜವಾನ್- ಜೈ ಕಿಸಾನ್’, ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನು ಜನರು ಕೂಗುತ್ತಿರುವುದು ಕಂಡುಬಂತು. ಇನ್ನು ಕೆಲವರು “ತಿರಂಗಾ ಕೆ ಅಪಮಾನ್ ನಹಿ ಸಹೆಂಗೆ ನಹಿ ಸಹೆಂಗೆ” (ತಿರಂಗಾಕ್ಕೆ ಅಪಮಾನ ಸಹಿಸೋದಿಲ್ಲ) ಎಂದು ಘೋಷಣೆ ಕೂಗಿದ್ದಾರೆ.
“ತಿರಂಗಾ ಯಾತ್ರೆ ಕೆನಡಾದ ಭಾರತೀಯರು ಭಾರತವನ್ನು ಪ್ರೀತಿಸುತ್ತಾರೆ ಮತ್ತು ಭಾರತ ಸರ್ಕಾರವನ್ನು ಬೆಂಬಲಿಸುತ್ತಾರೆ ಎಂದು ವ್ಯಕ್ತಪಡಿಸುವ ಒಂದು ಮಾರ್ಗವಾಗಿತ್ತು. ಬೃಹತ್ ವಹಿವಾಟು ಎರಡೂ ರಾಷ್ಟ್ರಗಳ ಉತ್ತಮ ಭವಿಷ್ಯದ ಸಂಕೇತವಾಗಿವೆ. ಯಾವಾಗಲೂ ಕಷ್ಟ ಮತ್ತು ಸುಖಗಳ ವೇಳೆ ಎರಡು ದೇಶಗಳು ಒಟ್ಟಿಗೆ ನಿಲ್ಲಬೇಕು” ಎಂದು ರ್ಯಾಲಿಯಲ್ಲಿ ಭಾಗವಹಿಸಿದವರು ಹೇಳಿದ್ದಾರೆ.
ಈ ರ್ಯಾಲಿಯು ಇತ್ತೀಚಿನ ದಿನಗಳಲ್ಲಿ ಕೆನಡಾದ ಅತ್ಯಂತ ಜನಾಂಗೀಯ ವೈವಿಧ್ಯಮಯ ನಗರದಲ್ಲಿ ಭಾರತೀಯ ವಲಸೆಗಾರರು ತಮ್ಮ ತಾಯ್ನಾಡಿನ ಬಗ್ಗೆ ದೇಶಪ್ರೇಮವನ್ನು ಪ್ರದರ್ಶಿಸುವ ಎರಡನೇ ತಿರಂಗಾ ಯಾತ್ರೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.