ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರಕ್ಕೆ ಸೂಕ್ಷ್ಮ ಕೆತ್ತನೆಯ 84 ಅಡಿ ಎತ್ತರದ ‘ಬ್ರಹ್ಮರಥ’ ಉಡುಪಿಯ ಕೋಟೇಶ್ವರದ ‘ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ’ದಲ್ಲಿ ನಿರ್ಮಾಣಗೊಳ್ಳಲಿದೆ.
ರಥ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲ ಆಚಾರ್ಯ ಜೊತೆ ಪಂಪಾ ಕ್ಷೇತ್ರ (ಹಂಪಿ) ಕಿಷ್ಕಿಂದಾಪುರಿಯ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಅಧ್ಯಕ್ಷ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಮಾತುಕತೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೂರಕ ಮಾತುಕತೆಗಳನ್ನು ನಡೆಸಲು ಜ. 20ರಂದು ರಾಜಗೋಪಾಲ ಆಚಾರ್ಯ ಅವರು ಕಿಷ್ಕಿಂದೆಗೆ ತೆರಳಲಿದ್ದಾರೆ. ರಥದ ವಿನ್ಯಾಸದ ಬಗೆಗೂ ಈ ಸಂದರ್ಭದಲ್ಲಿ ಚರ್ಚೆ ನಡೆಸಲಿದ್ದಾರೆ. ಮೇ ತಿಂಗಳಿನಲ್ಲಿ ಬ್ರಹ್ಮರಥ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಎರಡು ವರ್ಷದಲ್ಲಿ ನಿರ್ಮಾಣ ಪೂರ್ಣಗೊಳ್ಳಲಿದ್ದು, ರಾಮಮಂದಿರದ ಸಂಪೂರ್ಣವಾದಾಗಲೇ ಸಮರ್ಪಣೆ ಆಗಲಿದೆ.
ರಥ ನಿರ್ಮಾಣಕ್ಕೆ ಅಗತ್ಯವಾದ ಮರ ಸೇರಿದಂತೆ, ಇನ್ನಿತರ ಅಗತ್ಯ ವಸ್ತುಗಳನ್ನು ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಒದಗಿ
ಸಲಿದೆ. ಅತ್ಯಂತ ಸುರಕ್ಷಿತವಾಗಿ ರಥ ನಿರ್ಮಿಸಲು, ತಮ್ಮ ಶಿಲ್ಪಕಲಾ ಕೇಂದ್ರದ ಬಳಿಯಲ್ಲಿ ಪ್ರತ್ಯೇಕ ಕಾರ್ಖಾನೆಯನ್ನು ರಾಜಗೋಪಾಲ ಆಚಾರ್ಯ ಅವರು ನಿರ್ಮಿಸುತ್ತಿದ್ದು, ಅದರ ಕೆಲಸ ಏಪ್ರಿಲ್ನಲ್ಲಿ ಪೂರ್ಣಗೊಳ್ಳಲಿದೆ. ಈ ವರೆಗೆ ಲಕ್ಷ್ಮೀನಾರಾಯಣ ಆಚಾರ್ಯ ಅವರ ನೇತೃತ್ವದಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳ ವಿವಿಧ ಕ್ಷೇತ್ರಗಳಿಗೆ 127ಕ್ಕೂ ಹೆಚ್ಚು ರಥಗಳು ನಿರ್ಮಾಣಗೊಂಡಿವೆ. ಕೋಟೇಶ್ವರದ ಕೋಟಿಲಿಂಗೇಶ್ವರನಿಗೆ ನಿರ್ಮಿಸಿಕೊಟ್ಟ 63 ಅಡಿ ಎತ್ತರದ ರಥವನ್ನು ವೀಕ್ಷಿಸಿದ ಬಳಿಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿ, ಅಯೋಧ್ಯೆಯ ರಾಮನಿಗಾಗಿ ರಥ ನಿರ್ಮಾಣ ಕೆಲಸವನ್ನು ರಾಜಗೋಪಾಲ ಆಚಾರ್ಯ ಅವರಿಗೆ ವಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.