ಬೆಂಗಳೂರು: ನಗರದ ಪುಟ್ಟೇನಹಳ್ಳಿಯ ಹರಿಜನ ಕಾಲೋನಿಯಲ್ಲಿ ನಡೆದ ಅಯೋಧ್ಯೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಮೊದಲ ದಿನದ ಮೊದಲ ಮನೆಯಲ್ಲಿ ಕೌಸಲ್ಯಾ ದೇವಿ ಎಂಬ ಮಹಿಳೆಯೋರ್ವರು ನಿಧಿ ಸಮರ್ಪಿಸಿದ್ದಾರೆ.
ಅಭಿಯಾನದ ಪ್ರಾಂತ ಕಾರ್ಯದರ್ಶಿ ನಾ.ತಿಪ್ಪೇಸ್ವಾಮಿ ಜಿ ಅವರು ಮೊದಲ ದಿನದ ಮೊದಲನೇ ಮನೆಗೆ ಭೇಟಿ ಕೊಟ್ಟು ನಿಧಿಯನ್ನು ಕೇಳಿದ ಸಂದರ್ಭದಲ್ಲಿ, ಮನೆಯ ತಾಯಿ ಅಡುಗೆ ಮನೆಯ ಎಲ್ಲಾ ಡಬ್ಬಗಳನ್ನು ಹುಡುಕಿ 50 ರೂಪಾಯಿ ಧನ್ಯತಾ ಭಾವದಲ್ಲಿ ನೀಡಿದ್ದಾರೆ. ಕೂಪನ್ ನಲ್ಲಿ ಬರೆಯುವ ಸಲುವಾಗಿ ಹೆಸರು ಕೇಳಿದಾಗ ಕೌಸಲ್ಯದೇವಿ ಎಂದು ಹೇಳಿದರು. ಪ್ರಭು ಶ್ರೀರಾಮನ ಮಾತೆಯ ಹೆಸರು ಕೌಸಲ್ಯೆಯಾಗಿದ್ದು, ನಿಧಿ ಸಮರ್ಪಣೆ ಮಾಡಿದ ಮೊದಲ ಮನೆಯ ತಾಯಿಯೂ ಆಕೆಯದ್ದೇ ಹೆಸರು ಹೊಂದಿದ್ದನ್ನು ಕೇಳಿ ಎಲ್ಲಾ ಕಾರ್ಯಕರ್ತರು ಭಾವುಕರಾದರು.
ರಾಮ ಮಂದಿರ ಶೀಘ್ರದಲ್ಲೇ ನಿರ್ಮಾಣವಾಗುವಂತಾಗಲಿ ಎಂದು ಕೌಸಲ್ಯಾ ದೇವಿ ಅವರು ಹಾರೈಸಿದ್ದಾಗಿಯೂ ಅಭಿಯಾನಕ್ಕೆ ತೆರಳಿದ್ದ ತಂಡ ತಿಳಿಸಿದೆ. ನಿಧಿ ಸಮರ್ಪಣಾ ಅಭಿಯಾನಕ್ಕೆ ಈ ಘಟನೆ ಮತ್ತಷ್ಟು ಪ್ರೇರಣೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.