ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡೆನ್ ಅವರು ಇಬ್ಬರು ಭಾರತೀಯ-ಅಮೆರಿಕನ್ನರನ್ನು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಗೆ ನೇಮಕ ಮಾಡಿದ್ದಾರೆ.
ಬೈಡೆನ್ ಅವರು, ದಕ್ಷಿಣ ಏಷ್ಯಾದ ಹಿರಿಯ ನಿರ್ದೇಶಕರಾಗಿ ಭಾರತೀಯ-ಅಮೇರಿಕನ್ ಸುಮೋನಾ ಗುಹಾ ಮತ್ತು ತಂತ್ರಜ್ಞಾನ ಮತ್ತು ರಾಷ್ಟ್ರೀಯ ಭದ್ರತೆಯ ಹಿರಿಯ ನಿರ್ದೇಶಕರಾಗಿ ತರುಣ್ ಛಬ್ರಾ ಅವರನ್ನು ಹೆಸರಿಸಿದ್ದಾರೆ.
ಸುಮೋನಾ ಗುಹಾ ಪ್ರಸ್ತುತ ಆಲ್ಬ್ರೈಟ್ ಸ್ಟೋನ್ಬ್ರಿಡ್ಜ್ ಗ್ರೂಪ್ನಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬೈಡೆನ್-ಹ್ಯಾರಿಸ್ ಅಭಿಯಾನದ ಸಮಯದಲ್ಲಿ ದಕ್ಷಿಣ ಏಷ್ಯಾ ವಿದೇಶಾಂಗ ನೀತಿ ಕಾರ್ಯ ಸಮೂಹದ ಸಹ-ಅಧ್ಯಕ್ಷರಾಗಿದ್ದರು. ಒಬಾಮಾ-ಬೈಡೆನ್ ಆಡಳಿತದ ಸಮಯದಲ್ಲಿ, ಅವರು ಅಂದಿನ ಉಪಾಧ್ಯಕ್ಷ ಬೈಡೆನ್ಗೆ ರಾಷ್ಟ್ರೀಯ ಭದ್ರತಾ ವ್ಯವಹಾರಗಳ ವಿಶೇಷ ಸಲಹೆಗಾರರಾಗಿದ್ದರು. ಅವರು ಜಾನ್ಸ್ ಹಾಪ್ಕಿನ್ಸ್ ಮತ್ತು ಜಾರ್ಜ್ಟೌನ್ ವಿಶ್ವವಿದ್ಯಾಲಯದ ಪದವೀಧರೆ.
ತಂತ್ರಜ್ಞಾನ ಮತ್ತು ರಾಷ್ಟ್ರೀಯ ಭದ್ರತೆಗಾಗಿ ಹಿರಿಯ ನಿರ್ದೇಶಕರಾಗಿ ನೇಮಕಗೊಂಡ ತರುಣ್ ಛಬ್ರಾ, ಜಾರ್ಜ್ಟೌನ್ ವಿಶ್ವವಿದ್ಯಾಲಯದ ಭದ್ರತೆ ಮತ್ತು ಉದಯೋನ್ಮುಖ ತಂತ್ರಜ್ಞಾನ ಕೇಂದ್ರದ ಹಿರಿಯ ಸಹೋದ್ಯೋಗಿಯಾಗಿದ್ದಾರೆ. ಒಬಾಮ-ಬೈಡೆನ್ ಆಡಳಿತದ ಅವಧಿಯಲ್ಲಿ ಛಬ್ರಾ ಅವರು ರಾಷ್ಟ್ರೀಯ ಭದ್ರತಾ ಮಂಡಳಿಯ ಸಿಬ್ಬಂದಿಯಲ್ಲಿ ಕಾರ್ಯತಂತ್ರದ ಯೋಜನಾ ನಿರ್ದೇಶಕರಾಗಿ ಮತ್ತು ಮಾನವ ಹಕ್ಕುಗಳು ಮತ್ತು ರಾಷ್ಟ್ರೀಯ ಭದ್ರತಾ ವಿಷಯಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಛಬ್ರಾ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ, ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ಕಾನೂನು ಶಾಲೆಯ ಹಳೆಯ ವಿದ್ಯಾರ್ಥಿ.
ಬೈಡೆನ್ ತಮ್ಮ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಶಾಂತಿ ಕಲತಿಲ್ ಅವರನ್ನು ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಸಂಯೋಜಕರಾಗಿ ಹೆಸರಿಸಿದ್ದಾರೆ. ಅವರು ಪ್ರಸ್ತುತ ನ್ಯಾಷನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿಯಲ್ಲಿ ಇಂಟರ್ನ್ಯಾಷನಲ್ ಫೋರಮ್ ಫಾರ್ ಡೆಮಾಕ್ರಟಿಕ್ ಸ್ಟಡೀಸ್ನ ಹಿರಿಯ ನಿರ್ದೇಶಕರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.