ಬೆಂಗಳೂರು: ಇಲ್ಲಿನ ನಗರ ಪೊಲೀಸರು ಭಿಕ್ಷಾಟನೆ ನಡೆಸುತ್ತಿದ್ದ ಸುಮಾರು 250ಕ್ಕೂ ಅಧಿಕ ಮಂದಿ ಭಿಕ್ಷುಕರನ್ನು ರಕ್ಷಿಸಿದ್ದಾರೆ.
ಆಪರೇಷನ್ ಸ್ಮೈಲ್ ಎಂಬ ವಿಶೇಷ ಕಾರ್ಯಾಚರಣೆ ಮೂಲಕ 190 ಮಕ್ಕಳು ಸೇರಿದಂತೆ 250 ಮಂದಿ ಭಿಕ್ಷುಕರನ್ನು ರಕ್ಷಿಸಲಾಗಿದೆ. ಬೆಳಗ್ಗೆ 10ರಿಂದ ಸಂಜೆ 6ರ ತನಕ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಸಮಿತಿ ಸೇರಿದಂತೆ ಒಟ್ಟು ೭೦
ತಂಡಗಳು ಸೇರಿವೆ.
ಸಾರ್ವಜನಿಕರ ಸಹಾನುಭೂತಿ ಗಳಿಸುವ ಸಲುವಾಗಿ ಮಕ್ಕಳಿಗೆ ಮತ್ತು ಭರಿಸುವ ಔಷಧ ನೀಡಿ ಮತ್ತು ಅವರ ದೇಹದ ಮೇಲೆ ಗಾಯಗೊಳಿಸಿ ಭಿಕ್ಷಾಟನೆಗೆ ದೂಡಲಾಗುತ್ತಿತ್ತು ಎಂಬುದು ತಿಳಿದು ಬಂದಿದೆ.
ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಜಂಕ್ಷನ್ಗಳು, ಟ್ರಾಫಿಕ್ ಸಿಗ್ನಲ್, ವಾಣಿಜ್ಯ ಸಂಕಿರಣ, ಚಿತ್ರಮಂದಿರಗಳು, ಲಾಲ್ಬಾಗ್ ಕಬ್ಬನ್ ಪಾರ್ಕ್ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ಭಿಕ್ಷುಕರಿಂದ ಮಾಹಿತಿ ಪಡೆಯಲಾಗುತ್ತಿದೆ.
ಗೃಹಸಚಿವಾಲಯದ ಸೂಚನೆಯಂತೆ ವಿಶೇಷ ಫಟಕ ರಚಿಸಲಾಗಿದ್ದು, ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿಗಳಿಗೆ ಮಕ್ಕಳ ರಕ್ಷಣೆ ಬಗ್ಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ. ಹರಿಶೇಖರನ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.