ಉಧಂಪುರದಲ್ಲಿ ಬಿಎಸ್ಎಫ್ ಪಡೆಯ ಬಸ್ಸಿನ ಮೇಲೆ ನಡೆದ ದಾಳಿಯಲ್ಲಿ ವೀರ ಮರಣವನ್ನಪ್ಪಿದ ರಾಕಿ ಹಾಗೂ ಸುಭೇಂದು ಇವರು ನಿಜಕ್ಕೂ ಹೀರೋಗಳೇ. ಏಕೆಂದರೆ ಕೊನೆ ಉಸಿರಿನವರೆಗೂ ಉಗ್ರರ ಜೊತೆ ಹೋರಾಡಿ, ತಮ್ಮ ಜೀವವನ್ನು ಕೊಟ್ಟು 44 ಯೋಧರನ್ನು ರಕ್ಷಿಸಿದ ಕಾರ್ಯ ನಿಜಕ್ಕೂ ಶ್ಲಾಘನೀಯ.
ಆಗಸ್ಟ್ 5 ರ ಬುಧವಾರ ಬೆಳಗ್ಗೆ ಇಬ್ಬರು ಉಗ್ರರು ಉಧಂಪುರದಲ್ಲಿ ಬಿಎಸ್ಎಫ್ ಸಿಬ್ಬಂದಿಗಳಿದ್ದ ಬಸ್ನ ಮೇಲೆ ಗುಂಡು ಹಾಗೂ ಗ್ರೇನೇಡ್ಗಳನ್ನು ಬಳಸಿ ದಾಳಿ ಮಾಡಿದ್ದರು. ಬಸ್ನಲ್ಲಿದ್ದ 44 ಬಿಎಸ್ಎಫ್ ಸಿಬ್ಬಂದಿಗಳು ಕರ್ತವ್ಯದಲ್ಲಿರಲಿಲ್ಲ. ಆದ ಕಾರಣ ಅವರ ಬಳಿ ಪ್ರತಿ ದಾಳಿ ಮಾಡಲು ಯಾವುದೇ ಶಸ್ತ್ರಗಳಿರಲಿಲ್ಲ. ಈ ಸಂದರ್ಭದಲ್ಲಿ ಬಸ್ಸಿನ ಕಾವಲುಗಾರರಾಗಿದ್ದ ಹರಿಯಾಣ ಮೂಲದ ಬಿಎಸ್ಎಫ್ ಯೋಧ ರಾಕಿ ಎಂಬುವವರ ಬಳಿ ಮಾತ್ರ ಬಂದೂಕಿತ್ತು. ತನ್ನ ಬಳಿಯಿದ್ದ ಬಂದೂಕಿನಿಂದ ಸರಿ ಸುಮಾರು 40 ಗುಂಡುಗಳನ್ನು ಹಾರಿಸಿ ಒಬ್ಬ ಉಗ್ರನನ್ನು ಹತ್ಯೆ ಮಾಡಿದರು. ಇನ್ನೊಬ್ಬ ಉಗ್ರ ತಪ್ಪಿಸಿಕೊಂಡಿದ್ದು, ಈಗ ಬಂಧಿತನಾಗಿದ್ದಾನೆ.
ಮತ್ತೊಬ್ಬ ಉಗ್ರ ಬಸ್ಸಿನ ಬಾಗಿಲು ತೆರೆದು ಬಸ್ಸಿನೊಳಗೆ ನುಗ್ಗಲು ಯತ್ನಿಸುವ ಸಂದರ್ಭದಲ್ಲಿ ಬಸ್ನ ಚಾಲಕನಾಗಿದ್ದ ಯೋಧ ಬಂಗಾಳ ಮೂಲದ ಸುಭೇಂದು ರಾಯ್ ಉಗ್ರನನ್ನು ಒಳಗೆ ಬರದಂತೆ ತಡೆದು ಬಸ್ನ ಬಾಗಿಲನ್ನು ಗಟ್ಟಿಯಾಗಿ ಹಿಡಿದೇ ನಿಂತಿದ್ದ. ಎಷ್ಟೋ ಗುಂಡುಗಳು ಉಗ್ರರಿಂದ ಬಸ್ನ ಮೇಲೆ ಹಾರಿ ಬರುತ್ತಿದ್ದರೂ ದಿಟ್ಟತನದಿಂದ ಸುಭೇಂದು ಹಾಗೇ ಬಾಗಿಲು ಹಿಡಿದೇ ನಿಂತಿದ್ದ. ಇದರಿಂದಾಗಿ ಉಗ್ರ ಬಸ್ನೊಳಗೆ ಹೋಗಲು ಆಗಲಿಲ್ಲ. ಯೋಧ ರಾಕಿಯ ಗುಂಡೇಟುಗಳಿಗೆ ಹೆದರಿ ಆ ಕ್ಷಣದಲ್ಲಿ ತಪ್ಪಿಸಿಕೊಂಡ. ಉಗ್ರರ ಗುಂಡಿನ ಸುರಿಮಳೆ ತಡೆಯುವ ಸಂದರ್ಭ ಸುಭೇಂದು ಅವರಿಗೆ ಗುಂಡೇಟು ತಗುಲಿ ಹುತಾತ್ಮರಾದರು.
ಈ ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವ ರಾಜ್ನಾಥ್ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದು, ಇಬ್ಬರೂ ಯೋಧರಿಗೆ ಶೌರ್ಯ ಪ್ರಶಸ್ತಿ ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ.
44 ಜನರನ್ನು ರಕ್ಷಿಸಿದ ಈ ಇಬ್ಬರು ಯೋಧರ ವೀರಮರಣದ ಸಾಹಸವನ್ನು ಯಾವ ಮಾಧ್ಯಮಗಳೂ ಗುಣಗಾನ ಮಾಡುತ್ತಿಲ್ಲ. ಅಮರ ಜವಾನ್ರಾದ ಈ ಇಬ್ಬರೂ ಹುತಾತ್ಮರಿಗೆ ಶತ ಶತ ನಮನಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.