ಟೊರೆಂಟೋ: ಪಾಕಿಸ್ಥಾನ ಸರ್ಕಾರದ ವಿರುದ್ಧ ಸಮರ ಸಾರಿದ್ದ ಬಲೂಚ್ ಕಾರ್ಯಕರ್ತೆ ಕರಿಮಾ ಬಲೂಚ್ ಕೆನಡಾದ ಟೊರೊಂಟೊದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಬಲೂಚಿಸ್ಥಾನ್ ಪೋಸ್ಟ್ ವರದಿ ಮಾಡಿದೆ. ಆಕೆ 2016 ರಲ್ಲಿ ಪಾಕಿಸ್ಥಾನದಿಂದ ಪರಾರಿಯಾಗಿ ನಂತರ ನಿರಾಶ್ರಿತರಾಗಿ ಕೆನಡಾದಲ್ಲಿ ವಾಸಿಸುತ್ತಿದ್ದರು.
ಕರಿಮಾ ಬಲೂಚ್ ಅವರು ಪಾಕಿಸ್ಥಾನ ಸರ್ಕಾರದ ವಿರುದ್ಧ ಧ್ವನಿಯೆತ್ತುತ್ತಿದ್ದರು ಮತ್ತು ಬಲೂಚಿಸ್ಥಾನದಲ್ಲಿ ಜನರ ಮೇಲೆ ನಡೆಯುತ್ತಿದ್ದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎತ್ತಿ ತೋರಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು.
ಕರಿಮಾ ಬಲೂಚ್ ಅವರು ಬಲೂಚ್ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಲು ಒತ್ತು ನೀಡಿದ್ದರು ಮತ್ತು ಪಾಕಿಸ್ಥಾನದ ಕಾನೂನು ವ್ಯವಸ್ಥೆ ಮತ್ತು ಧಾರ್ಮಿಕ ಗುಂಪುಗಳು ರಾಜ್ಯ ಮತ್ತು ಸರ್ಕಾರಿ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಮಹಿಳೆಯರನ್ನು, ದುರ್ಬಲ ವರ್ಗದವರನ್ನು ಗುರಿಯಾಗಿಸಲು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ಎತ್ತಿ ತೋರಿಸಿದರು.
2016ರಲ್ಲಿ ರಕ್ಷಾ ಬಂಧನ ದಿನದಂದು ಪ್ರಧಾನಿ ನರೇಂದ್ರ ಮೋದಿಯರಿಗೆ ಶುಭ ಹಾರೈಸಿ ಅವರನ್ನು ಹೊಗಳಿದ್ದ ಕರಿಮಾ ಭಾರತದಲ್ಲಿ ಭಾರೀ ಸುದ್ದಿ ಮಾಡಿದ್ದರು, ಅಲ್ಲದೇ, ಬಲೂಚಿಸ್ಥಾನದಲ್ಲಿ ವಾಸಿಸುವ ಜನರ ದುಃಸ್ಥಿತಿಯತ್ತ ಗಮನ ನೀಡುವಂತೆ ಅವರು ಮೋದಿಗೆ ಮನವಿ ಮಾಡಿದ್ದರು.
“ಈ ದಿನ ನಾನು ನಿಮ್ಮ ಬಳಿಗೆ ಬಂದಿದ್ದೇನೆ ಮತ್ತು ನಿಮ್ಮನ್ನು ನಮ್ಮ ಸಹೋದರ ಎಂದು ಪರಿಗಣಿಸುತ್ತೇನೆ ಎಂದು ಹೇಳಲು ಬಯಸುತ್ತೇನೆ. ನೀವು, ಬಲೂಚ್ ನರಮೇಧ, ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ಯುದ್ಧ ಅಪರಾಧಗಳು, ಮಾನವ ಹಕ್ಕುಗಳ ಉಲ್ಲಂಘನೆಗೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿಯಾಗಬೇಕೆಂದು ಮತ್ತು ಸಹೋದರರನ್ನು ಕಳೆದುಕೊಂಡ ಆ ಸಹೋದರಿಯರಿಗೆ ಧ್ವನಿಯಾಗಬೇಕೆಂದು ನಾವು ನಿರೀಕ್ಷೆ ಮಾಡುತ್ತೇವೆ” ಎಂದು ಕರಿಮಾ ಮೋದಿಗೆ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.