ಬೆಂಗಳೂರು : ಕರ್ನಾಟಕದ ಜನತೆಯ ಜೊತೆ ಚರ್ಚಿಸುವ ಅವಕಾಶ ದೊರೆಕಿಸಿದ ಕರ್ನಾಟಕ ಬಿಜೆಪಿ ಹಾಗೂ ಜನತೆಯನ್ನು ಶ್ಲಾಘಿಸಿದ ಮೋದಿ ಕರ್ನಾಟಕ ಬಿಜೆಪಿ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿರುವ ಸಂದರ್ಭದಲ್ಲಿ, ಇಂದು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಬಿಜೆಪಿ ಏರ್ಪಡಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕೆಲವು ವರ್ಷಗಳಿಂದ ಮಾಧ್ಯಮ, ಪತ್ರಿಕೆಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಬರುತ್ತಿದ್ದಾಗ ಭಾರತದ ಜನತೆಗೆ ಬೆಳೆಯುವ ಅವಕಾಶವಿಲ್ಲ ಎಂದು ಎಲ್ಲರೂ ಚಿಂತಿಸುವಂತಿತ್ತು. ಯುವಕರಿಗೂ ತನ್ನ ಭವಿಷ್ಯದ ಕುರಿತು ಚಿಂತೆ ಕಾಡುತ್ತಿತ್ತು. ಆದರೂ ದೇಶದ ಜನರು ತಮ್ಮ ಭರವಸೆಯನ್ನು ಕಳೆದುಕೊಳ್ಳದೆ, ಬಿಜೆಪಿ ಮೇಲೆ ವಿಶ್ವಾಸವಿರಿಸಿ ನಮ್ಮನ್ನು ಚುನಾಯಿಸಿ, ಸರಕಾರ ರಚಿಸಲು ನಮಗೆ ಅವಕಾಶ ಮಾಡಿ ಕೊಟ್ಟಿತು. ಭಾರತ ಎಂದೂ ಹಿಂದುಳಿಯಲು ಸಾಧ್ಯವಿಲ್ಲ. 10 ತಿಂಗಳ ಅವಧಿಯಲ್ಲಿ ದೇಶದ ಅಭಿವೃದ್ಧಿಯ ಅನುಭವವಾಗಿದೆ. ದೇಶ ಇಂದು ಎಲ್ಲಾ ವಿಭಾಗಗಳಲ್ಲಿ ವೇಗದಲ್ಲಿ ಮುಂದೆ ಸಾಗುತ್ತಿದೆ. ಇಷ್ಠಾದರೂ ಪ್ರತಿಪಕ್ಷಗಳು ನಮ್ಮನ್ನು ಟೀಕಿಸುವುದು ಬಿಡುತ್ತಿಲ್ಲ.
ಕಪ್ಪು ಹಣದ ಬಗ್ಗೆ ಕಾಂಗ್ರಸ್ ತಪ್ಪು ಮಾಡಿದೆ. ಅವರ ನೀತಿ ಸರಿಯಿದ್ದರೂ ಅವರ ನಿಯತ್ತು ಸರಿಯಿರಲಿಲ್ಲ. ದೇಶಕ್ಕಾಗಿ ದುಡಿಯುವ ಬಗ್ಗೆ ನಮ್ಮ ನಿಯತ್ತನ್ನು ಯಾರೂ ಪ್ರಶ್ನಿಸುವಂತಿಲ್ಲ. ಎಸ್ಐಟಿ ಕುರಿತು ಕಾಂಗ್ರೆಸ್ಗೆ ಮನಸ್ಸಿರಲಿಲ್ಲ. ಈಗ ನಾವು ಕಪ್ಪು ಹಣ ತರುವ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಎಸ್ಐಟಿ ಬಗ್ಗೆ ವಿಚಾರ ಮಾಡಲಾಯಿತು. ವಿಶ್ವದ ಎಲ್ಲಾ ದೇಶಗಳೊಂದಿಗೆ ಕಪ್ಪು ಹಣದ ಬಗ್ಗೆ ಚರ್ಚಿಸಿದ್ದೇನೆ.
ದೇಶದ ಮುಂದೆ ನಮ್ಮ ಸರ್ಕಾರ ಪ್ರತಿಯೊಬ್ಬನಿಗೂ ಬೇಕಾಗುವ ರೀತಿಯಲ್ಲಿ ಒಂದು ದೃಷ್ಟಿಕೋನ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಹಿಂದೆಂದಿಗಿಂತ ವಿಭಿನ್ನ ರೀತಿಯಲ್ಲಿ ರೈಲ್ವೇ ಬಜೆಟ್ ಅನ್ನು ಮಂಡಿಸಿದ್ದೇವೆ. ಡಿಟಿಜಲ್ ಇಂಡಿಯಾ ಯೋಜನೆಯನ್ನು ಸಾಕಾರಗೊಳಿಸಲು ಸರ್ಕಾರ ಅನೇಕ ಯೋಜನೆಗಳನ್ನು ಹೊಂದಿದೆ.
ರಾಜ್ಯ ಸರ್ಕಾರದಲ್ಲಿ ಯಾವುದೇ ಪಕ್ಷದ ಆಡಳಿತವಿದ್ದರೂ ಕೇಂದ್ರ ಎಲ್ಲಾ ರಾಜ್ಯಗಳನ್ನೂ ಒಂದೇ ಸಮಾನವಾಗಿ ಕಾಣುತ್ತದೆ. ರೈತರ ಉದ್ಧಾರದಿಂದ ಭಾರತ ಉನ್ನತಿ ಸಾಧಿಸುತ್ತದೆ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅವಶ್ಯಕತೆ ಇದೆ.
ದೇಶದ ಸಮಗ್ರ ಅಭಿವೃದ್ಧಿಗೆ ನಾವು ಎಂದೆಂದೂ ಬದ್ಧರಾಗಿರುತ್ತೇವೆ.
30 ಜನರು ಆಸೀನರಾಗಬಹುದಾದ ವೇದಿಕೆಯಲ್ಲಿ ಎಲ್.ಕೆ. ಅಡ್ವಾಣಿ, ರಾಜನಾಥ್ ಸಿಂಗ್, ಅಮಿತ್ ಶಾ, ಸುಷ್ಮಾ ಸ್ವರಾಜ್, ಮುರಳಿ ಮನೋಹರ ಜೋಶಿ, ದೇವೇಂದ್ರ ಫಡ್ನವಿಸ್, ಶಿವರಾಜ್ ಸಿಂಗ್ ಚೌಹಾಣ್, ರಾಜ್ಯದ ಪ್ರಮುಖ ಬಿಜೆಪಿ ನಾಯಕರಾದ ಅನಂತ ಕುಮಾರ್, ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಮತ್ತಿನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು. ಅನಂತ ಕುಮಾರ್, ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪನವರು ಮಾತನಾಡಿ ರಾಜ್ಯ ಸರ್ಕಾರದ ವೈಫಲ್ಯದ ಕುರಿತು ಒತ್ತಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.