ಮುಂಬಯಿ: ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಧ್ಯಮಗಳು ನನಗೆ ಆಸಕ್ತಿದಾಯಕ ಮನೋರಂಜನೆಗಳಾಗಿವೆ ಎಂದಿದ್ದಾರೆ.
ಮಾಧ್ಯಮಗಳು ನೀಡುತ್ತಿರುವ ಸಲಹೆ ಸರಿಯಾಗಿರಬಹುದು, ಆದರೆ ಸರಿಯಾಗಿರುವುದನ್ನು ತಪ್ಪು ಎಂಬಂತೆ ಬಿಂಬಿಸುತ್ತಾರೆ, ಇದರಿಂದ ಜನರು ಮಾಹಿತಿ ಹೀನರಾಗುತ್ತಾರೆ ಎಂದಿರುವ ಅವರು, ರಾಷ್ಟ್ರೀಯ ಹಿತಾಸಕ್ತಿಯನ್ನು ಎಲ್ಲದಕ್ಕಿಂತಲೂ ಮಿಗಿಲಾಗಿ ನೋಡಬೇಕು ಎಂದು ಸಲಹೆ ನೀಡಿದ್ದಾರೆ.
ಮಾರಾಟವಾಗುವ ಉದ್ದೇಶದಿಂದ ನ್ಯೂಸ್ಪೇಪರ್ನಲ್ಲಿ ಬರೆಯಲಾಗುತ್ತದೆ, ಟಿಆರ್ಪಿಗಾಗಿ ಟಿವಿಯಲ್ಲಿ ಕಾರ್ಯಕ್ರಮ ನೀಡಲಾಗುತ್ತದೆ. ಹೀಗಿರುವಾಗ ನಾನೇಕೆ ನನ್ನ ಅಭಿಪ್ರಾಯಗಳನ್ನು ಅವರ ಮೇಲೆ ಹೇರಲಿ ಎಂದು ಪ್ರಶ್ನಿಸಿದ್ದಾರೆ.
ನಾವು ಒಟ್ಟಿಗೆ ಮುಳುಗಲಿ ಅಥವಾ ಒಟ್ಟಿಗೆ ಬದುಕಲಿ ರಾಷ್ಟ್ರೀಯ ಹಿತಾಸಕ್ತಿ ಎಂಬುದು ನಮ್ಮೆಲ್ಲರಿಗಿಂತಲೂ ಮಿಗಿಲಾದುದು, ನಾವು ಮುಳುಗಿದರೆ ಈ ಎಲ್ಲಾ ಅಬಿವ್ಯಕ್ತಿ ಸ್ವಾತಂತ್ರ್ಯಗಳೂ ಮುಳುಗುತ್ತವೆ ಎಂದು ದೋವಲ್ ಎಚ್ಚರಿಸಿದ್ದಾರೆ.
ಜನರಲ್ಲಿ ಒಡಕು ಮೂಡುವಂತ ಕಾರ್ಯವನ್ನು ಮಾಡಬೇಡಿ, ಬಲಿಷ್ಠ ರಾಷ್ಟ್ರದ ನಿರ್ಮಾಣ ಮಾಡಿ, ನಮ್ಮ ಜನರನ್ನು ಒಗ್ಗಟ್ಟಾಗಿರುವಂತೆ ಮಾಡಿ ಎಂದು ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.