ನವದೆಹಲಿ: ದೇಶದಲ್ಲಿ ಮಿಲಿಟರಿ ಸಮವಸ್ತ್ರ ತಯಾರಿಸಲು ಬಳಸುವ ಚೀನೀ ಮತ್ತು ಇತರ ವಿದೇಶಿ ಬಟ್ಟೆಗಳನ್ನು ಬದಲಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಅದು ಭಾರತೀಯ ಜವಳಿ ಉದ್ಯಮಗಳಿಗೆ ನೂಲುಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತಿದೆ. ಇದು ಈ ವಲಯದಲ್ಲಿ ಆಮದಿನ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು ಸಹಾಯ ಮಾಡಲಿದೆ.
ಡಿಆರ್ಡಿಒದ ಕೈಗಾರಿಕಾ ಇಂಟರ್ಫೇಸ್ ಮತ್ತು ತಂತ್ರಜ್ಞಾನ ನಿರ್ವಹಣಾ ನಿರ್ದೇಶನಾಲಯದ ನಿರ್ದೇಶಕ ಡಾ.ಮಯಂಕ್ ದ್ವಿವೇದಿ ಮಾತನಾಡಿ, “ಭಾರತೀಯ ಸೇನೆಯ ಬೇಸಿಗೆ ಸಮವಸ್ತ್ರಕ್ಕೆಯೇ ಬೇಕಾಗುವ ಬಟ್ಟೆಯ ಅಂದಾಜು ಅವಶ್ಯಕತೆ 55 ಲಕ್ಷ ಮೀಟರ್ ಮತ್ತು ನೌಕಾಪಡೆ, ವಾಯುಪಡೆ ಮತ್ತು ಪ್ಯಾರಾ ಮಿಲಿಟರಿಯ ಎಲ್ಲಾ ಅಗತ್ಯತೆಗಳು ಗಮನಕ್ಕೆ ತೆಗೆದುಕೊಂಡರೆ ಬಟ್ಟೆಯ ಅವಶ್ಯಕತೆಯು ವರ್ಷಕ್ಕೆ 1.5 ಕೋಟಿ ಮೀಟರ್ ಮೀರಿ ಹೋಗಬಹುದು” ಎಂದಿದ್ದಾರೆ.
“ನಾವು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕರೆಯನ್ನು ಅನುಸರಿಸುತ್ತಿದ್ದೇವೆ. ಭಾರತದ ಎಲ್ಲಾ ಉತ್ಪನ್ನಗಳಲ್ಲಿ ಅದರಲ್ಲೂ ವಿಶೇಷವಾಗಿ ರಕ್ಷಣಾ ಉತ್ಪನ್ನಗಳಲ್ಲಿ ಸ್ವಾವಲಂಬನೆಗಾಗಿ ಕರೆ ನೀಡುತ್ತಿದ್ದೇವೆ. ಸಶಸ್ತ್ರ ಪಡೆಗಳಿಗೆ ಸಮವಸ್ತ್ರ ತಯಾರಿಕೆಯ ಉದ್ದೇಶಕ್ಕಾಗಿ ನೂಲುಗಳು ಮತ್ತು ಬಟ್ಟೆಗಳನ್ನು ಭಾರತದಲ್ಲಿ ತಯಾರಿಸಿದರೆ ಅದು ನಿಜಕ್ಕೂ ದೊಡ್ಡ ಸಾಧನೆಯಾಗಲಿದೆ. ಏಕೆಂದರೆ ಅದು ಆತ್ಮನಿರ್ಭರ ಭಾರತದ ಕಡೆಗೆ ಒಂದು ಹೆಜ್ಜೆ ಮುಂದೆ ಸಾಗಲು ನಮಗೆ ಸಹಾಯ ಮಾಡುತ್ತದೆ ”ಎಂದು ದ್ವಿವೇದಿ ಹೇಳುತ್ತಾರೆ.
“ರಾಕೆಟ್ ಮೋಟರ್ಗಳಿಗೆ ತಾಂತ್ರಿಕ ಜವಳಿ ಮತ್ತು ಕ್ಷಿಪಣಿ ವ್ಯವಸ್ಥೆಗೆ ಸಂಯೋಜಿತ ರಚನೆಯನ್ನು ಮಾಡುವತ್ತ ನಾವು ಕೆಲಸ ಮಾಡುತ್ತಿದ್ದೇವೆ. ನಾವು ತಾಂತ್ರಿಕ ಜವಳಿಗಳನ್ನು ಬುಲೆಟ್ ಪ್ರೂಫ್ ಜಾಕೆಟ್ಗಳಲ್ಲಿ ಬಳಸುತ್ತಿದ್ದೇವೆ. ಅಂತೆಯೇ, ಇತ್ತೀಚೆಗೆ ಸೂರತ್ ಉದ್ಯಮದಲ್ಲಿ ಸಿಐಐ ವೆಬಿನಾರ್ನಲ್ಲಿ ಸೈನ್ಯದ ಸಮವಸ್ತ್ರವನ್ನು ತಯಾರಿಸಲು ನೈಲಾನ್ 6,6 ನೂಲು, ಲೈಕ್ರಾ ಫೈಬರ್, ವಿಸ್ಕೋಸ್, ಪಾಲಿಯೆಸ್ಟರ್ ಮುಂತಾದ ಮಿಶ್ರಣಗಳನ್ನು ಮಾಡುವ ಆಲೋಚನೆಯನ್ನು ನಾನು ಹಂಚಿಕೊಂಡಿದ್ದೇನೆ. ಭಾರತೀಯ ಸಶಸ್ತ್ರ ಪಡೆಗಳ ನಿರ್ದಿಷ್ಟ ಅವಶ್ಯಕತೆಗೆ ಅನುಗುಣವಾಗಿ ಸಮವಸ್ತ್ರವನ್ನು ಹೆಚ್ಚು ಉತ್ತಮ ರೀತಿಯಲ್ಲಿ ಮಾಡಬಹುದಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.