ನ್ಯೂಯಾರ್ಕ್: ಕೋವಿಡ್ -19ರ ಅವಧಿಯಲ್ಲಿ ಯುನೈಟೆಡ್ ಸ್ಟೇಟ್ಸ್ನಾದ್ಯಂತ ಸಮುದಾಯ ಸೇವೆಗಾಗಿ ಸತತ ಪರಿಶ್ರಮ ನಡೆಸಿದ್ದಕ್ಕಾಗಿ, ʼಸೇವಾ ಇಂಟರ್ನ್ಯಾಷನಲ್ʼ ಭಾರತೀಯ-ಅಮೇರಿಕನ್ ಲಾಭರಹಿತ ಸಂಸ್ಥೆಗೆ ನ್ಯೂಯಾರ್ಕ್ ಲೈಫ್ ಫೌಂಡೇಶನ್ನಿಂದ 50,000 ಯುಎಸ್ ಡಾಲರ್ ಲವ್ ಟೇಕ್ಸ್ ಆಕ್ಷನ್ ಪ್ರಶಸ್ತಿಯನ್ನು ನೀಡಲಾಗಿದೆ.
ಟೆಕ್ಸಾಸ್ನ ಹ್ಯಾರಿಸ್ ಕೌಂಟಿಯಲ್ಲಿನ ಬಡ ಸಮುದಾಯಕ್ಕೆ ಆಹಾರ ಕಿಟ್ಗಳನ್ನು ಒದಗಿಸಲು, ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಫೇಸ್ ಮಾಸ್ಕ್), ಹ್ಯಾಂಡ್ ಸ್ಯಾನಿಟೈಸರ್ಗಳನ್ನು ವಿತರಿಸಲು, ಮೂಲಕ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಅಧ್ಯಯನ-ಸಂಬಂಧಿತ ಬೆಂಬಲವನ್ನು ನೀಡುವ ಸೇವಾ ಇಂಟರ್ನ್ಯಾಷನಲ್ ಕಾರ್ಯಕ್ಕೆ ಪ್ರಶಸ್ತಿ ಮೊತ್ತ ಸದ್ಭಳಕೆಯಾಗಲಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅಸಾಧಾರಣ ಸಾರ್ವಜನಿಕ ಸೇವೆಯನ್ನು ಪ್ರದರ್ಶಿಸಿದ ಯುಎಸ್ನ 35 ಸಮುದಾಯದ ಸದಸ್ಯರಲ್ಲಿ ಸೇವಾ ಇಂಟರ್ನ್ಯಾಷನಲ್ನ ಅಧ್ಯಕ್ಷ ಅರುಣ್ ಕಂಕಣಿ ಕೂಡ ಒಬ್ಬರಾಗಿದ್ದಾರೆ.
“ನಾವು ನಿಸ್ವಾರ್ಥ ಕಾರ್ಯದ ತತ್ವವನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ನಮ್ಮ ಸ್ವಯಂಸೇವಕರು ನಿಸ್ವಾರ್ಥ ಕರ್ಮದ ಮನೋಭಾವವನ್ನು ಸಾಕಾರಗೊಳಿಸುತ್ತಿದ್ದಾರೆ. ಈ ಪ್ರಶಸ್ತಿ ನಮ್ಮ ಸ್ವಯಂಸೇವಕರ ಮನೋಭಾವವನ್ನು ಗುರುತಿಸುತ್ತದೆ. ನಾನು ಕೇವಲ ಪ್ರಶಸ್ತಿಯನ್ನು ವಿನಮ್ರ ಮತ್ತು ಔಪಚಾರಿಕ ಸ್ವೀಕರಿಸುವವನು. ನಾವು ಮಾಡುವ ಕೆಲಸವನ್ನು ಗುರುತಿಸಿದ್ದಕ್ಕಾಗಿ ನ್ಯೂಯಾರ್ಕ್ ಲೈಫ್ ಫೌಂಡೇಶನ್ಗೆ ಧನ್ಯವಾದ ಹೇಳುತ್ತೇನೆ” ಎಂದು ಕಂಕಣಿ ಹೇಳಿದ್ದಾರೆ.
ಭಾರತದಲ್ಲಿ, ಸೇವಾ ಇಂಟರ್ನ್ಯಾಷನಲ್ ಅನ್ನು 1997 ರಲ್ಲಿ ನೋಂದಾಯಿತ ಲಾಭರಹಿತ ಟ್ರಸ್ಟ್ ಆಗಿ ಸ್ಥಾಪಿಸಲಾಯಿತು, ಇದು ‘ಸರ್ವಿಸ್ ಬಿಫೋರ್ ಸೆಲ್ಫ್’ ಮತ್ತು “ವರ್ಲ್ಡ್ ಈಸ್ ಒನ್ ಫ್ಯಾಮಿಲಿ” ಎಂಬ ಭಾರತೀಯ ಧ್ಯೇಯಗಳನ್ನು ಆಧರಿಸಿದೆ. ಪ್ರಾರಂಭವಾದಾಗಿನಿಂದ, ಸೇವಾ ಇಂಟರ್ನ್ಯಾಷನಲ್ ಜಾತಿ, ಮತ, ಬಣ್ಣ, ಧರ್ಮ, ಜನಾಂಗ ಅಥವಾ ಪ್ರದೇಶವನ್ನು ಲೆಕ್ಕಿಸದೆ ಮಾನವೀಯತೆಗೆ ಸೇವೆ ಸಲ್ಲಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.