ಸಿಡ್ನಿ: ಆಸ್ಟ್ರೇಲಿಯದ ಒಂದು ಪಟ್ಟಣದ ನಿರ್ಜನ ಪ್ರದೇಶದಲ್ಲಿ ಸುಮಾರು 70 ಮೊಸಳೆಗಳ ತಲೆ ಫ್ರೀಜರ್ನಲ್ಲಿ ತುಂಬಿಸಿದ್ದು ಕೊಳೆಯುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಲ್ಲಿನ ಪೊಲೀಸ್ ಮೂಲಗಳು ತಿಳಿಸಿವೆ. ಮೊಸಳೆಗಳನ್ನು ಸಾಯಿಸುವ ಪ್ರಯತ್ನವಾಗಿದ್ದಲ್ಲಿ ಆರೋಪಿಗಳು ದೊಡ್ಡ ಪ್ರಮಾಣದಲ್ಲಿ ದಂಡ ಪಾವತಿಸುವ ಹಾಗೂ ಜೈಲು ಶಿಕ್ಷೆ ಅನುಭವಿಸಬೇಕಾದ ಸಾಧ್ಯತೆ ಇದೆ.
ಕೆಲವು ಹದಿಹರೆಯದ ಯುವಕರು ಡಾರ್ವಿನ್ನಿಂದ 40 ಕಿ.ಮೀ. ದೂರದ ಹಮ್ಟಿ ಡೂನಲ್ಲಿನ ಸಾಲು ಅಂಗಡಿಗಳ ಹಿಂದೆ ಇದನ್ನು ಕಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರು.
ಸಮುದ್ರವಾಸಿ 50 ಮೊಸಳೆಗಳು ಸೇರಿದಂತೆ 70 ಮೊಸಳೆಗಳನ್ನು ಇದರಲ್ಲಿ ತುಂಬಿಸಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈವರೆಗೆ ಯಾರಿಗೂ ಬಂಧಿಸಿಲ್ಲ. ಒಂದು ವೇಳೆ ಯಾರಾದರೂ ಈ ರಕ್ಷಿತ ವನ್ಯಜೀವಿಗಳನ್ನು ಕೊಲ್ಲಲ್ಪಟ್ಟಲ್ಲಿ, ಆರೋಪಿಯು 55 ಮಿಲಿಯನ್ ಡಾಲರ್ನಷ್ಟು ದಂಡ ಇಲ್ಲವೇ 5 ವರ್ಷ ಜೈಲು ಸಜೆ ಅನುಭವಿಸಬೇಕಾಗುತ್ತದೆ.
ಈ ಸಮುದ್ರವಾಸಿ ಮೊಸಳೆಗಳು ಏಳು ಮೀಟರ್ (23 ಫೀಟ್)ಗಳಷ್ಟು ಉದ್ದವಿದ್ದು, ಸುಮಾರು ಒಂದು ಟನ್ನಷ್ಟು ಭಾರವಿರುತ್ತದೆ. 1971ರಲ್ಲಿ ಈ ವನ್ಯಜೀವಿಗಳು ಸುರಕ್ಷಿತ ಜೀವಿಗಳೆಂದು ಘೋಷಿಸಿದ ಬಳಿಕ ಉತ್ತರ ಆಸ್ಟ್ರೇಲಿಯದಲ್ಲಿ ಅವುಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ವರ್ಷ ಸುಮಾರು 500 ಆಯ್ದ ಮೊಸಳೆಗಳನ್ನು ರಕ್ಷಿಸಲಾಗುತ್ತಿದೆ.
ಉತ್ತರ ಪ್ರಾಂತ್ಯದಲ್ಲಿ 60 ಸೆ.ಮೀ. ಉದ್ದದ ಮೊಸಳೆಗಳನ್ನು ಸಾಕು ಪ್ರಾಣಿಯಾಗಿ ಸಾಕುವುದು ಕಾನೂನುಬದ್ಧವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.