
ನ್ಯೂಯಾರ್ಕ್: ಕೊರೋನಾ ಸಂಕಷ್ಟದ ವಿರುದ್ದ ಹೋರಾಟ ಹಾಗೂ ಲಸಿಕೆ ತಯಾರಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೂಸ್ ಅಧನಾಮ್ ಗೆಬ್ರೆಯೆಸಸ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೊರೋನಾ ವಿಚಾರವಾಗಿ ಪ್ರಧಾನಿ ಮೋದಿ ಅವರ ಜೊತೆಗೆ ದೂರವಾಣಿಯ ಮೂಲಕ ಸಂಭಾಷಣೆ ನಡೆಸಿದ ಅವರು, ಆ ಬಳಿಕ ಮೋದಿ ಅವರ ಕಾರ್ಯವೈಖರಿ, ಬದ್ಧತೆಯನ್ನು ಮೆಚ್ಚಿ, ಮೋದಿ ಅವರಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ.
ಕೊರೋನಾ ಸಂದರ್ಭದಲ್ಲಿ ವೈದ್ಯ, ವಿಜ್ಞಾನ, ಔಷಧ ಕ್ಷೇತ್ರಗಳಲ್ಲಿ ಪರಸ್ಪರ ಸಹಭಾಗಿತ್ವ, ಜ್ಞಾನ, ಸಂಶೋಧನೆಗಳನ್ನು ಕೊಡು ಕೊಳ್ಳುವಿಕೆ ಮಾಡಿಕೊಳ್ಳುವುದು, ಸೂಕ್ತ ತರಬೇತಿ ಜೊತೆಗೆ ವಿಷಮ ಪರಿಸ್ಥಿತಿಯಲ್ಲಿ ಹೋರಿಟ ನಡೆಸುವ ಕುರಿತಂತೆ ಫೋನ್ ಮೂಲಕ ಮೋದಿ ಮತ್ತು ಗೆಬ್ರೆಯೆಸಸ್ ಚರ್ಚೆ ನಡೆಸಿದ್ದಾರೆ.
ಕೊರೋನಾ ಇಡೀ ಜಗತ್ತಿನ ನಿದ್ದೆಗೆಡಿಸಿದೆ. ಈ ಸನ್ನಿವೇಶವನ್ನು ಪರಸ್ಪರ ಸಹಕಾರ ಮನೋಭಾವದಿಂದ ಮಾತ್ರವೇ ನಿಯಂತ್ರಿಸಲು, ನಾಶಗೊಳಿಸಲು ಸಾಧ್ಯ. ಕೊರೋನಾ ಹೋರಾಟ, ಲಸಿಕೆ ತಯಾರಿಕೆಯ ಜೊತೆಗೆ ಅದನ್ನು ದೇಶ, ವಿದೇಶಗಳಿಗೂ ಪೂರೈಕೆ ಮಾಡಲು ಪೂರಕ ಎಂಬಂತೆ ಭಾರತ ತನ್ನ ಲಸಿಕೆ ಉತ್ಪಾದನಾ ಸಾಮರ್ಥ್ಯದಲ್ಲಿ ತೋರಿಸುತ್ತಿರುವ ಬದ್ಧತೆಗೆ ಧನ್ಯವಾದಗಳನ್ನು ಗೆಬ್ರೆಯೆಸಸ್ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
Namaste, Prime Minister @narendramodi, for a very productive call on how to strengthen our collaboration & advance access to knowledge, research and training in traditional medicine globally. @WHO welcomes India’s 🇮🇳 leading role in global health, & to universal health coverage.
— Tedros Adhanom Ghebreyesus (@DrTedros) November 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


