ಬೆಳಗಾವಿ: ಬೆಳಗಾವಿ ಮೂಲದ 65 ವರ್ಷದ ಶ್ರೀ ತಾನೆಂದರ್ ಅವರು ಪ್ರಸ್ತುತ ಅಮೆರಿಕದ ಮಿಚಿಗನ್ನಲ್ಲಿ ಚುನಾವಣೆ ಗೆದ್ದು, ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ಗೆ ಡೆಮೋಕ್ರಾಟಿಕ್ ಸದಸ್ಯನಾಗಿ ಆಯ್ಕೆಯಾಗಿದ್ದಾರೆ.
1979ರಲ್ಲಿ ಕೇವಲ 20 ಅಮೆರಿಕನ್ ಡಾಲರ್ ಹಣದೊಂದಿಗೆ ಸಣ್ಣ ಸೂಟ್ಕೇಸ್ ಹಿಡಿದು ಅಮೆರಿಕಾಗೆ ತೆರಳಿದ್ದ ಶ್ರೀ ತಾನೆಂದರ್ ಇಂದು ಮಿಲಿಯನೇರ್ ಉದ್ಯಮಿಯಾಗಿದ್ದಾರೆ.
ಮನೆಮನೆಗೆ ತೆರಳಿ ಜನರ ಸಮಸ್ಯೆಯನ್ನು ಅರಿತುಕೊಂಡಿರುವ ಅವರು ಜನರನ್ನು ತಮ್ಮತ್ತ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶೇ.93%ರಷ್ಟು ಮತಗಳನ್ನು ಅವರು ಪಡೆದುಕೊಂಡಿದ್ದಾರೆ.
ಬೆಳಗಾವಿ ಮೂಲದ ಶಹಪುರದ ಮಿರಪುರ್ ಗಲ್ಲಿಯವರಾದ ತಾನೆಂದರ್ ಅವರು ಮಧ್ಯಮ ವರ್ಗದ ಕುಟುಂಬದಲ್ಲಿ 9 ಮಕ್ಕಳಲ್ಲಿ ಒಬ್ಬರಾಗಿ ಬೆಳೆದರು. ಇಂದು ಅವರು ಅಮೆರಿಕಾದ ಯಶಸ್ವಿ ಉದ್ಯಮಿಯಾಗಿದ್ದಾರೆ. ಮಾತ್ರವಲ್ಲದೇ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೊ ಬೈಡನ್ ಮತ್ತು ಕಮಲಾ ಹ್ಯಾರೀಸ್ ಜೋಡಿ ಗೆಲ್ಲುವ ಎಲ್ಲಾ ಸೂಚನೆಗಳು ದೊರೆತಿದೆ. ಕಮಲಾ ಕೂಡ ಭಾರತೀಯ ಮೂಲದವರು ಎಂಬುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.