ನವದೆಹಲಿ: ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸುವ ಸಲುವಾಗಿ 10 ಲಕ್ಷ ಟನ್ ಆಲೂಗಡ್ಡೆ ಆಮದು ಮಾಡಿಕೊಳ್ಳಲು ಕೇಂದ್ರ ನಿರ್ಧರಿಸಿದೆ. ಭೂತಾನ್ನಿಂದ ಪರವಾನಗಿ ಇಲ್ಲದೆ 30,000 ಟನ್ ಆಲೂಗಡ್ಡೆಯನ್ನು ಸರ್ಕಾರ ಆಮದು ಮಾಡಿಕೊಳ್ಳಲಿದೆ.
ಹೆಚ್ಚುತ್ತಿರುವ ಆಲೂಗೆಡ್ಡೆ ಬೆಲೆ ತಗ್ಗಿಸಲು ಸರ್ಕಾರವು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಆಲೂಗೆಡ್ಡೆ ಮೇಲಿನ ಆಮದು ಸುಂಕವನ್ನು ಈ ಹಿಂದೆ 30%ಕ್ಕಿಂತ 10%ಕ್ಕೆ ಇಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈಗ, ಮುಂದಿನ ವರ್ಷದ ಜನವರಿ 31 ರವರೆಗೆ 10 ಲಕ್ಷ ಮೆಟ್ರಿಕ್ ಟನ್ ಆಲೂಗಡ್ಡೆಯನ್ನು ಶೇಕಡಾ 10 ರಷ್ಟು ಆಮದು ಸುಂಕಕ್ಕೆ ಆಮದು ಮಾಡಿಕೊಳ್ಳಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.
ದೀಪಾವಳಿಯ ಮೊದಲು 25 ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಕೇಂದ್ರ ಯೋಜಿಸಿದೆ. ಖಾಸಗಿ ಆಮದುದಾರರ ಮೂಲಕ ನಫೆಡ್ ಈಗಾಗಲೇ ಸಂಗ್ರಹಿಸಿರುವ 7,000 ಟನ್ ಈರುಳ್ಳಿಗೆ ಹೆಚ್ಚುವರಿಯಾಗಿ ಇದು ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.