ಮುಂಬಯಿ: ಮನಸ್ಸಲ್ಲಿ ಭಕ್ತಿಯನ್ನು ತುಂಬಿಕೊಂಡಿರುವ ಮನುಷ್ಯ ತನ್ನ ಆರಾಧ್ಯ ದೇವರಿಗಾಗಿ ಯಾವುದೇ ಸವಾಲನ್ನು ಸ್ವೀಕರಿಸಲು ಹಿಂಜರಿಯುವುದಿಲ್ಲ. ಇದಕ್ಕೆ ಉದಾಹರಣೆ 68 ವರ್ಷದ ಮರಾಠಿ ಮಹಿಳೆ.
ಇವರು ಸೈಕಲ್ ಮೂಲಕ ಮುಂಬಯಿಯಿಂದ 2200 ಕಿಲೋಮೀಟರ್ ದೂರದಲ್ಲಿ ಇರುವ ವೈಷ್ಣೋದೇವಿಗೆ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದಾರೆ. ಇವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಆಕೆಯ ಭಕ್ತಿ ಮತ್ತು ಸಮರ್ಪಣೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈಷ್ಣೋದೇವಿ ಜಮ್ಮು ಮತ್ತು ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿರುವ ಪ್ರಸಿದ್ಧ ದೇಗುಲವಾಗಿದೆ. ಇಲ್ಲಿಗೆ ವರ್ಷಂಪ್ರತಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಷ್ಟು ದೂರದ ದೇಗುಲಕ್ಕೆ ತೆರಳಿ ದೇವಿಯ ದರ್ಶನ ಪಡೆಯಬೇಕು ಎಂಬುದು ಮಹಿಳೆಯ ಇಚ್ಛೆಯಾಗಿತ್ತು. ಹೀಗಾಗಿ ಆಕೆ ಏಕಾಂಗಿಯಾಗಿ ಸೈಕಲ್ ಮೂಲಕ ಪ್ರಯಾಣ ಬೆಳೆಸಿದ್ದಾರೆ
ಈ ಬಗೆಗಿನ ವಿಡಿಯೋ ಅನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ರತನ್ ಶಾರ್ದ ಎಂಬವರು, “68 ವರ್ಷದ ಮರಾಠಿ ಮಹಿಳೆ ಸೈಕಲ್ ಮೂಲಕ ವೈಷ್ಣೋದೇವಿಗೆ ತೆರಳುತ್ತಿದ್ದಾರೆ. ಖಮಾಂಗ್ನಿಂದ 2200 ಕಿಮೀ ಪ್ರಯಾಣ ನಡೆಸುತ್ತಿದ್ದಾರೆ. ಇದು ಮದರ್ ಪವರ್” ಎಂದಿದ್ದಾರೆ.
A 68 year old Marathi lady is going to Vaishnodevi on her own, alone, by geared cycle. 2200 km from Khamgaon. Mother’s power 🙏💐😇 #MatruShakti pic.twitter.com/TcoOnda2Zg
— Ratan Sharda 🇮🇳 (@RatanSharda55) October 19, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.