ನವದೆಹಲಿ: ಪೊಲೀಸ್ ಸಂಸ್ಮರಣಾ ದಿನವನ್ನು ಇಂದು ಆಚರಿಸಲಾಗುತ್ತಿದೆ. ರಾಷ್ಟ್ರಕ್ಕಾಗಿ ಪೊಲೀಸ್ ಸಿಬ್ಬಂದಿಯ ನಿಷ್ಠೆ ಮತ್ತು ಸರ್ವೋಚ್ಚ ತ್ಯಾಗವನ್ನು ಗೌರವಿಸಲು ಪ್ರತಿ ವರ್ಷ ಅಕ್ಟೋಬರ್ 21 ರಂದು ಈ ದಿನವನ್ನು ಆಚರಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮೂಲಕ ಪೊಲೀಸರ ಸಾಹಸ ಮತ್ತು ತ್ಯಾಗವನ್ನು ಕೊಂಡಿದ್ದಾರೆ. ಟ್ವಿಟ್ ಮಾಡಿರುವ ಅವರು, “”ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರಿಂದ ಹಿಡಿದು ಭಯಾನಕ ಅಪರಾಧ ಪ್ರಕರಣಗಳನ್ನು ಬಗೆಹರಿಸುವವರೆಗೆ, ವಿಪತ್ತು ನಿರ್ವಹಣೆಗೆ ಸಹಾಯ ಮಾಡುವುದರಿಂದ ಹಿಡಿದು ಕೋವಿಡ್-19 ವಿರುದ್ಧ ಹೋರಾಡುವವರೆಗೆ, ಯಾವುದೇ ಹಿಂಜರಿಕೆಯಿಲ್ಲದೆ ನಮ್ಮ ಪೊಲೀಸ್ ಸಿಬ್ಬಂದಿಗಳು ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಜನ ಸೇವೆಯತ್ತ ಅವರ ಸಮರ್ಪಣೆ ಮತ್ತು ಸರ್ವ ಸನ್ನದ್ಧತೆಯ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದಿದ್ದಾರೆ.
“ಪೊಲೀಸ್ ಸಂಸ್ಮರಣಾ ದಿನವು ನಮ್ಮ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಭಾರತದಾದ್ಯಂತ ಕೃತಜ್ಞತೆ ಸಲ್ಲಿಸುವ ಅವಕಾಶವಾಗಿದೆ. ಕರ್ತವ್ಯದ ಸಾಲಿನಲ್ಲಿ ಹುತಾತ್ಮರಾದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ನಾವು ಗೌರವ ಸಲ್ಲಿಸುತ್ತೇವೆ. ಅವರ ತ್ಯಾಗ ಮತ್ತು ಸೇವೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ” ಎಂದಿದ್ದಾರೆ.
ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಇಂದು ಬೆಳಿಗ್ಗೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಗೃಹ ಸಚಿವ ಅಮಿತ್ ಶಾ ಗೌರವ ಸಲ್ಲಿಸಿದರು.
From preserving law and order to solving horrendous crimes, from assistance in disaster management to fighting COVID-19, our police personnel always give their best without hesitation. We are proud of their diligence and readiness to assist citizens. pic.twitter.com/fI2ptv3A1J
— Narendra Modi (@narendramodi) October 21, 2020
Police Commemoration Day is about expressing gratitude to our police personnel and their families all across India. We pay tributes to all the police personnel martyred in the line of duty. Their sacrifice and service would always be remembered. pic.twitter.com/69gkT1yH24
— Narendra Modi (@narendramodi) October 21, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.