ಲಕ್ನೋ: ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ ಸರ್ಕಾರ ಹತ್ರಾಸ್ ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಮಾತ್ರವಲ್ಲದೆ ಅಮಾನತುಗೊಂಡ ಪೊಲೀಸರ ಮತ್ತು ಆರೋಪಿಗಳ, ಸಂಸತ್ರಸ್ಥೆಯ ಕುಟುಂಬಸ್ಥರ ನಾರ್ಕೊ ಟೆಸ್ಟ್ ಮತ್ತು ಸುಳ್ಳು ಪತ್ತೆ ಪರೀಕ್ಷೆ ಮಾಡಿಸಲು ಕೂಡ ಆದೇಶ ಹೊರಡಿಸಿದೆ.
ಉತ್ತರಪ್ರದೇಶ ಸರ್ಕಾರ ನಡೆಸಿದ ಪ್ರಾಥಮಿಕ ತನಿಖೆ ಆಧಾರದ ಮೇಲೆ ಎಸ್ಪಿ ವಿಕ್ರಾಂತ್ ವೀರ್ ಅವರನ್ನು ಅಮಾನತು ಮಾಡಲಾಗಿದೆ. ಅಮಾನತ್ತುಗೊಂಡ ಇತರ ಅಧಿಕಾರಿಗಳೆಂದರೆ, ಸಿಒ ರಾಮ್ ಶಬ್ದ್, ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ವರ್ಮ, ಎಸ್ಐ ಜಗವೀರ್ ಸಿಂಗ್ ಮತ್ತು ಹೆಡ್ ಕಾನ್ಸ್ಟೇಬಲ್ ಮಹೇಶ್ ಪಾಲ್.
“ಹತ್ರಾಸ್ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್ಪಿ, ಡಿಎಸ್ಪಿ, ಇನ್ಸ್ಪೆಕ್ಟರ್ ಮತ್ತು ಇತರ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ” ಎಂದು ಸಿಎಂ ಕಾರ್ಯಾಲಯ ಶುಕ್ರವಾರ ಸಂಜೆ ತಿಳಿಸಿತ್ತು.
‘ ಅಮಾನತುಗೊಂಡ ಎಸ್ಪಿ ಮತ್ತು ಡಿಎಸ್ಪಿಗಳ nacro-polygraph ಪರೀಕ್ಷೆ ಕೂಡ ನಡೆಯಲಿದೆ” ಎಂದು ತಿಳಿಸಿದೆ.
ನಿನ್ನೆ ಟ್ವೀಟ್ ಮಾಡಿದ ಯೋಗಿ ಆದಿತ್ಯನಾಥ ಅವರು, ಮಹಿಳೆಯರ ಘನತೆ ಮತ್ತು ಸ್ವಾಭಿಮಾನಕ್ಕೆ ದಕ್ಕೆ ಏನು ತರುವವರ ವಿರುದ್ಧ ಭವಿಷ್ಯಕ್ಕೆ ಉದಾಹರಣೆಯಾಗುವ ಅಂತಹ ಶಿಕ್ಷೆಯನ್ನು ನೀಡಲಿದ್ದೇವೆ ಎಂಬ ಭರವಸೆಯನ್ನು ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.