ಲಂಡನ್: ಫೇಸ್ಬುಕ್ ಸೌರಶಕ್ತಿ ಚಾಲಿತ ಬೃಹತ್ ಡ್ರೋನ್ ಕ್ಯಾಮೆರಾ ಒಂದನ್ನು ನಿರ್ಮಿಸಿದೆ. ಹಲವು ತಿಂಗಳುಗಳ ಕಾಲ ವಾಯುಮಂಡಲದಲ್ಲಿ ಉಳಿಯಬಲ್ಲ ಈ ಡ್ರೋನ್, ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಬ್ರಾಡ್ಬ್ಯಾಂಡ್ ಸಂಪರ್ಕ ತಲುಪಿಸುವ ಉದ್ದೇಶ ಹೊಂದಿದೆ.
ಅಕ್ವಿಲಾ ಎಂಬ ಹೆಸರಿನ ಈ ಡ್ರೋನ್ನ ನಿರ್ಮಾಣ 2014ರಲ್ಲಿ ಆರಂಭಿಸಲಾಗಿತ್ತು. ಜಗತ್ತಿನಾದ್ಯಂತ ಫೇಸ್ಬುಕ್ ಜಾಲತಾಣದ ಸಂಪರ್ಕ ಹೊಂದಲು ಈ ಡ್ರೋನ್ ನಿರ್ಮಿಸಲಾಗಿದೆ. ಇಂಟರ್ನೆಟ್ ಹಾಗೂ ಇನ್ನಿತರ ಮೂಲಸೌಕರ್ಯದ ಕೊರತೆಯಿಂದ ಆನ್ಲೈನ್ ಸಂಪರ್ಕ ಹೊಂದಲು ಸಮಸ್ಯೆ ಎದುರಿಸುತ್ತಿರುವ ಜನರಿಗಾಗಿ ಈ ಸೌಲಭ್ಯ ಒದಗಿಸಲಾಗಿದೆ. ಫೇಸ್ಬುಕ್ ಈಗ ಡ್ರೋನ್, ಸ್ಯಾಟಲೈಟ್, ಲೇಸರ್ ತಂತ್ರಜ್ಞಾನಗಳ ಸಹಾಯದಿಂದ ಕಾರ್ಯಾಚರಿಸುತ್ತಿದೆ.
ಯು.ಕೆ. ರಾಷ್ಟ್ರದ ಆ್ಯಸೆಂಟಾ ಕಂಪೆನಿಯ ಮೂಲಕ ಈ ಡ್ರೋನ್ನ ನಿರ್ಮಾಣ ಆರಂಭಿಸಲಾಗಿತ್ತು. ಮೂರು ತಿಂಗಳುಗಳ ಕಾಲ ಏಕಕಾಲದಲ್ಲಿ ವಾಯುಮಂಡಲದಲ್ಲಿ ಇರಬಲ್ಲದು ಹಾಗೂ ಇದರ 50 ಮೈಲು ರೇಡಿಯಸ್ ಪ್ರದೇಶದಲ್ಲಿನ ಜನರಿಗೆ ಇಂಟರ್ನೆಟ್ ಒದಗಿಸಬಲ್ಲದು.
ಕಾರ್ಬನ್ ಫೈಬರ್ನಿಂದ ನಿರ್ಮಿಸಲಾಗಿರುವ ಈ ಡ್ರೋನ್ 140 ಫೀಟ್ ಸುತ್ತಳತೆ ಹೊಂದಿದ್ದು, ಬ್ಯಾಟರಿ, ಮೋಟಾರ್ ಮತ್ತಿತರ ಉಪಕರಣದ ಅಳವಡಿಕೆಯೊಂದಿಗೆ 880 ಪೌಂಡ್ ತೂಕ ಹೊಂದಿದೆ. ಇಂಟರ್ನೆಟ್ ಪಡೆಯಲು ಲೇಸರ್ ಸಹಾಯದಿಂದ ಡ್ರೋನ್ಗೆ ಸಂಪರ್ಕ ಕಲ್ಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.