ನವದೆಹಲಿ: ಭಾರತೀಯ ನೌಕಾಪಡೆಯು ಕರ್ತವ್ಯದಲ್ಲಿ ಲಿಂಗ ಸಮಾನತೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸಬ್ ಲೆಪ್ಟಿನೆಂಟ್ ರಿತಿ ಸಿಂಗ್ ಅವರು ನೌಕಾಪಡೆಯ ಯುದ್ಧ ನೌಕೆಯಲ್ಲಿ ನಿಯೋಜನೆಗೊಳ್ಳುತ್ತಿರುವ ಮೊದಲ ಮಹಿಳಾ ಅಧಿಕಾರಿಗಳಾಗಿ ಹೊರಹೊಮ್ಮಲಿದ್ದಾರೆ.
ಭಾರತೀಯ ನೌಕಾಪಡೆಯ ಹಲವು ರ್ಯಾಂಕ್ಗಳಲ್ಲಿ ಅನೇಕ ಮಹಿಳಾ ಉದ್ಯೋಗಿಗಳು ಇದ್ದಾರೆ. ಆದರೆ ಯುದ್ಧನೌಕೆಗಳಲ್ಲಿ ದೀರ್ಘಾವಧಿಗೆ ಮಹಿಳಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿರಲಿಲ್ಲ. ಆದರೆ ಇದೀಗ ಇಬ್ಬರು ಮಹಿಳೆಯರು ಯುದ್ಧನೌಕೆಗಳು ಯೋಜನೆಗೊಳ್ಳುತ್ತಿರುವುದು ಮಹತ್ವದ ಬೆಳವಣಿಗೆ ಎನಿಸಿಕೊಂಡಿದೆ.
ನೌಕಾಪಡೆಯ ಮಲ್ಟಿ-ರೋಲ್ ಹೆಲಿಕಾಪ್ಟರ್ಗಳಲ್ಲಿ ಸೋನಾರ್ ಕನ್ಸೋಲ್ಗಳು ಮತ್ತು ಇಂಟೆಲಿಜೆನ್ಸ್, ಕಣ್ಗಾವಲು ಮತ್ತು ರಿಕಾನಿಸೆನ್ಸ್ (ಐಎಸ್ಆರ್) ಪೇಲೋಡ್ಗಳನ್ನು ಒಳಗೊಂಡಂತೆ ಹಲವಾರು ಸಂವೇದಕಗಳನ್ನು ನಿರ್ವಹಿಸಲು ತರಬೇತಿ ಪಡೆಯುತ್ತಿರುವ ಇಬ್ಬರು ಯುವ ಮಹಿಳಾ ಅಧಿಕಾರಿಗಳು ಯುದ್ಧನೌಕೆಯಲ್ಲಿ ನಿಯೋಜಿತರಾಗಿದ್ದಾರೆ. ಈ ಇಬ್ಬರು ಅಧಿಕಾರಿಗಳು ನೌಕಾಪಡೆಯ ಹೊಸ ಎಂಹೆಚ್ -60 ಆರ್ ಹೆಲಿಕಾಪ್ಟರ್ಗಳಲ್ಲಿ ಹಾರಾಟ ನಡೆಸುವ ನಿರೀಕ್ಷೆಯಿದೆ. ವಿಶ್ವದ ಅತ್ಯಾಧುನಿಕ ಬಹು-ಪಾತ್ರ ಹೆಲಿಕಾಪ್ಟರ್ ಎಂದು ಪರಿಗಣಿಸಲಾಗಿರುವ MH-60R ಅನ್ನು ಶತ್ರು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ, ಇದರಲ್ಲಿ ಕ್ಷಿಪಣಿಗಳು ಮತ್ತು ಟಾರ್ಪಿಡೊಗಳನ್ನು ಬಳಸಬಹುದು. 2018 ರಲ್ಲಿ, ಆಗಿನ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ $ 2.6 ಬಿಲಿಯನ್ ಅಂದಾಜು ಒಪ್ಪಂದದಲ್ಲಿ ಲಾಕ್ಹೀಡ್-ಮಾರ್ಟಿನ್ ನಿರ್ಮಿಸಿದ ಈ ಹೆಲಿಕಾಫ್ಟರ್ಗಳ ಖರೀದಿಗೆ ಅನುಮೋದನೆ ನೀಡಿದ್ದರು.
ಭಾರತೀಯ ವಾಯುಪಡೆ (ಐಎಎಫ್) ತನ್ನ ರಫೆಲ್ ಫೈಟರ್ ಜೆಟ್ಗಳಲ್ಲಿ ಕಾರ್ಯನಿರ್ವಹಿಸಲು ಮಹಿಳಾ ಫೈಟರ್ ಪೈಲಟ್ನನ್ನು ಶಾರ್ಟ್ಲಿಸ್ಟ್ ಮಾಡಿದೆ ಎಂಬ ಸುದ್ದಿ ಹೊರಹೊಮ್ಮಿದ ಒಂದು ದಿನದ ಬಳಿಕ ಮಹಿಳಾ ಅಧಿಕಾರಿಗಳನ್ನು ಆನ್ಬೋರ್ಡ್ ಹಡಗುಗಳಲ್ಲಿ ನಿಯೋಜನ ಮಾಡಲಾಗುತ್ತಿದೆ ಎಂಬ ಸುದ್ದಿ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.