ಪ್ಯಾರೀಸ್: ಹಿಂದೂ ಮಹಾಸಗರದ ರಿಯೂನಿಯನ್ ಐಸ್ಲ್ಯಾಂಡ್ನಲ್ಲಿ ವಿಮಾನದ ಕೆಲವೊಂದು ಅವಶೇಷಗಳನ್ನು ಫ್ರೆಂಚ್ ಅಧಿಕಾರಿಗಳು ಪತ್ತೆ ಮಾಡಿದ್ದು, ಇದು ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನ ಎಂಎಚ್೩೭೦ರ ಅವಶೇಷಗಳಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಆದರೆ ಸಿಕ್ಕಿರುವ ಅವಶೇಷಗಳು ಮಲೇಷ್ಯಾ ಏರ್ಲೈನ್ಸ್ನದ್ದೇ ಎಂದು ಖಚಿತಪಡಿಸುವ ಯಾವುದೇ ಪುರಾವೆಗಳು ಇನ್ನೂ ಸಿಕ್ಕಿಲ್ಲ. ಮಲೇಷ್ಯಾ ಮತ್ತು ಆಸ್ಟ್ರೇಲಿಯಾದ ಸಹಕಾರದೊಂದಿಗೆ ಈ ಬಗ್ಗೆ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ, ಅಲ್ಲದೇ ಹೆಚ್ಚಿನ ಶೋಧನೆ ನಡೆಸಲಾಗುತ್ತಿದೆ. ಫ್ರೆಂಚ್ ಐಸ್ಲ್ಯಾಂಡ್ನ ಮಡಗಾಸ್ಕರ್ ಸಮೀಪ ಈ ಅವಶೇಷಗಳು ಪತ್ತೆಯಾಗಿವೆ.
ಈ ಶೋಧನೆ ಯಶಸ್ವಿಯಾಗಿ ಇದು ಎಂಎಚ್370 ವಿಮಾನದದೇ ಅವಶೇಷ ಎಂಬುದು ಪತ್ತೆಯಾದರೆ, ಒಂದು ವರ್ಷಗಳ ನಿಗೂಢತೆ ಅಂತಿಮ ತೆರೆ ಬೀಳಲಿದೆ.
2014ರ ಮಾರ್ಚ್ನಲ್ಲಿ 239 ಪ್ರಯಾಣಿಕರನ್ನು ಹೊತ್ತು ಕೌಲಾಲಂಪುರದಿಂದ ಬೀಜಿಂಗ್ಗೆ ಹೊರಟಿದ್ದ ವಿಮಾನ ಮಾರ್ಗಮಧ್ಯೆ ನಾಪತ್ತೆಯಾಗಿತ್ತು. ಇದುವರೆಗೆ ಅದು ಎಲ್ಲಿದೆ, ಏನಾಗಿದೆ ಎಂಬ ಸುಳಿವು ಸಿಕ್ಕಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.