ನವದೆಹಲಿ: ಖ್ಯಾತ ಟ್ವಿಟರ್ ಬಳಕೆದಾರ ಅನ್ಶೂಲ್ ಸಕ್ಸೇನಾ ಅವರು ದಿಗ್ಭ್ರಮೆಗೊಳಿಸುವಂತಹ ಮಾಹಿತಿಯೊಂದನ್ನು ಹೊರ ಹಾಕಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೆಸರಿನಲ್ಲಿ ಇದ್ದ ನಕಲಿ ಯುಪಿಐ ಐಡಿಗಳನ್ನು ಅವರು ಪತ್ತೆ ಮಾಡಿದ್ದಾರೆ. ನಕಲಿ ಐಡಿಗಳನ್ನು ಬಳಸಿಕೊಂಡು ರಾಮ ಭಕ್ತರಿಂದ ಹಣ ವಸೂಲಿ ಮಾಡುವ ದಂಧೆಯಲ್ಲಿ ಇವುಗಳು ಭಾಗಿಯಾಗಿದ್ದವು ಎನ್ನಲಾಗಿದೆ.
ಅನ್ಶೂಲ್ ಅವರು ತಮ್ಮ ಟ್ವಿಟರ್ ಪೋಸ್ಟ್ನಲ್ಲಿ ನಕಲಿ ಯುಪಿಐ ಐಡಿಗಳು ಮತ್ತು ಅದರ ಹಿಂದಿನ ವ್ಯಕ್ತಿಗಳ ವಿವರಗಳನ್ನು ಒದಗಿಸಿದ್ದಾರೆ.
ನಮಗೆ ಈಗಾಗಲೇ ತಿಳಿದಿರುವಂತೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಮತ್ತು ಅವರ ಅಧಿಕೃತ ಯುಪಿಐ ಐಡಿಯನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಆಗಸ್ಟ್ 12, 2020 ರಂದು (ಲಿಂಕ್) ಹಂಚಿಕೊಂಡಿದೆ. ಅದೇ ಯುಪಿಐ ಐಡಿ ಮತ್ತು ಬ್ಯಾಂಕ್ ವಿವರಗಳು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ವೆಬ್ಸೈಟ್ನಲ್ಲಿಯೂ ಲಭ್ಯವಿದೆ. ಇದರ ಮೂಲಕ ಅದು ದೇಣಿಗೆಗಳನ್ನು ಸಂಗ್ರಹ ಮಾಡುತ್ತಿದೆ.
ಆದರೆ ಕೆಲವು ದುಷ್ಕರ್ಮಿಗಳು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಐಪಿಯನ್ನು ಹೋಲುವ ನಕಲಿ ಯುಪಿಐ ಐಟಿ ಸೃಷ್ಟಿ ಮಾಡಿ ಮೋಸದಿಂದ ಹಣ ಕೀಳುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ಮೂಲಕ ಧಾರ್ಮಿಕ ನಂಬಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದು ಅನ್ಶೂಲ್ ಅವರ ಟ್ವಿಟರ್ ತನಿಖೆಯಿಂದ ಬಹಿರಂಗಗೊಂಡಿದೆ.
Alert: Cyber Fraud in The Name of Ram Mandir Construction in Ayodhya.
I have busted 5 fraud UPI IDs which are very similar to the authentic UPI ID of Shri Ram Janmabhoomi Teerth Kshetra and information sent to SBI.
This is important. Kindly read & sharehttps://t.co/Q0okjR3zNJ
— Anshul Saxena (@AskAnshul) August 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.