ನವದೆಹಲಿ: ಕೋವಿಡ್-19 ನಿಂದ ಭಾರತದ ಚೇತರಿಕೆ ದರ ಮತ್ತಷ್ಟು ಸುಧಾರಿಸಿದೆ ಮತ್ತು ಈಗ ಅದು ಇಂದು ಶೇಕಡಾ 74.69 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 63,631 ಕೋವಿಡ್ ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಈವರೆಗೆ ಒಟ್ಟು 22,22,000 ಜನರು ಚೇತರಿಸಿಕೊಂಡಿದ್ದಾರೆ.
ಪ್ರಸ್ತುತ, ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 6,00,097 ಕ್ಕಿಂತ ಹೆಚ್ಚಿದೆ. ಕಳೆದ 24 ಗಂಟೆಗಳಲ್ಲಿ, 945 ಸಾವುಗಳು ಸಂಭವಿಸಿದೆ. ಇದರಿಂದ ಒಟ್ಟು ಸಾವುಗಳ ಸಂಖ್ಯೆ 55,794 ಕ್ಕೆ ತಲುಪಿದೆ ಎಂದು ವರದಿಯಾಗಿದೆ. ಒಂದು ದಿನದಲ್ಲಿ 69,874 ಸೋಂಕುಗಳ ಏರಿಕೆಯೊಂದಿಗೆ, ಭಾರತದ ಕೋವಿಡ್-19 ಸಂಖ್ಯೆಯು 29,75,701 ಕ್ಕೆ ಏರಿದೆ. ದೇಶದಲ್ಲಿ ಕರೋನವೈರಸ್ ಸೋಂಕಿನ 6,97,330 ಸಕ್ರಿಯ ಪ್ರಕರಣಗಳಿವೆ.
ಪ್ರಕರಣದ ಸಾವಿನ ಪ್ರಮಾಣವು ಸ್ಥಿರವಾದ ಕುಸಿತವನ್ನು ತೋರಿಸುತ್ತಲೇ ಇದೆ ಮತ್ತು ಈಗ ಅದು ಶೇಕಡಾ 1.87 ರಷ್ಟಿದೆ. ಒಂದೇ ದಿನದಲ್ಲಿ 10 ಲಕ್ಷ ಕೊವಿಡ್ -19 ಪರೀಕ್ಷೆಗಳನ್ನು ನಡೆಸಿ ಭಾರತ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಆರೋಗ್ಯ ಸಚಿವಾಲಯವು ಕಳೆದ 24 ಗಂಟೆಗಳಲ್ಲಿ 10,23,000 ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದೆ. ಇದು ಒಟ್ಟು ಪರೀಕ್ಷೆಗಳನ್ನು 3 ಕೋಟಿ 44 ಲಕ್ಷಕ್ಕೆ ತೆಗೆದುಕೊಂಡು ಹೋಗಿದೆ.
ನಿನ್ನೆ 10,23,836 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದುವರೆಗಿನ ಒಂದು ದಿನದಲ್ಲಿ ಅತಿ ಹೆಚ್ಚು ನಡೆಸಲ್ಪಟ್ಟ ಪರಿಕ್ಷೆಯಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಪರೀಕ್ಷೆಯ ಮೂಲಕ ಆರಂಭಿಕ ಗುರುತಿಸುವಿಕೆ, ಮೇಲ್ವಿಚಾರಣೆಯ, ಪ್ರತ್ಯೇಕಿಸುವಿಕೆ ಮತ್ತು ಗುಣಮಟ್ಟದ ವೈದ್ಯಕೀಯ ಆರೈಕೆಯ ಮೂಲಕ ನವೀನ ಶ್ರೇಣೀಕೃತ ನೀತಿ ಕ್ರಮಗಳ ಮೂಲಕ ತ್ವರಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯ ಮೂಲಕ ಕಳೆದ 21 ದಿನಗಳಲ್ಲಿ ಚೇತರಿಸಿಕೊಂಡ ಪ್ರಕರಣಗಳಲ್ಲಿ ಶೇಕಡಾ 100 ರಷ್ಟು ಹೆಚ್ಚಳವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.