ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಮತ್ತು ಅಂದಿನಿಂದ ನಡೆದ ಘಟನೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಯುವ ನಟನಿಗೆ ನ್ಯಾಯ ಕೋರಿ ಹಲವಾರು ಅಭಿಯಾನಗಳೇ ನಡೆಯುತ್ತಿವೆ. ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಯುತ್ತಿದೆ. #CBIForSSR ಅಭಿಯಾನಕ್ಕೆ ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ರಿಪಬ್ಲಿಕ್ ಟಿವಿ #CBIForSSR ಅಭಿಯಾನವನ್ನು ಪ್ರಾರಂಭಿಸಿದ್ದು, ಅಭಿಯಾನ ಆರಂಭವಾದ ಕೂಡಲೇ ಇದಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ನೆಟಿಜನ್ಗಳಿಗೆ ಮಿಸ್ಡ್ ಕರೆಗಳು, ವಾಟ್ಸಾಪ್ ಸಂದೇಶಗಳು ಮತ್ತು ಟ್ವೀಟ್ಗಳ ಮೂಲಕ ಅಭಿಯಾನಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ನಿರ್ದಿಷ್ಟವಾಗಿ ಟ್ವಿಟರ್ನಲ್ಲಿ, ಈ ಅಭಿಯಾನವು ರಾಷ್ಟ್ರೀಯ ಮಟ್ಟದಲ್ಲಿ ಟಾಪ್ ಟ್ರೆಂಡ್ ಅನ್ನು ಸೃಷ್ಟಿಸಿತು. ಈಗ, #CBIForSSR ಅಭಿಯಾನವು 27,81,707 ಟ್ವೀಟ್ಗಳನ್ನು ಸ್ವೀಕರಿಸಿದೆ ಎಂದು ತಿಳಿದುಬಂದಿದೆ.
ಕುತೂಹಲಕಾರಿ ಸಂಗತಿಯೆಂದರೆ, ಅದರಲ್ಲಿ ಕೇವಲ 44 ಪ್ರತಿಶತ ಅಥವಾ 12,25,778 ಮಾತ್ರ ಭಾರತದಿಂದ ಬಂದಿದ್ದು, ಉಳಿದವು 15 ಲಕ್ಷಕ್ಕೂ ಹೆಚ್ಚಿನವು ಭಾರತದಿಂದ ಹೊರಗಿನಿಂದ ಬಂದಿವೆ. ಏಷ್ಯಾದ ಇತರ ದೇಶಗಳು ಮಾತ್ರವಲ್ಲ, ಉತ್ತರ ಅಮೆರಿಕಾ, ಆಫ್ರಿಕಾ, ಯುರೋಪ್ ಮತ್ತು ಓಷಿಯಾನಿಯಾ ಖಂಡಗಳಲ್ಲಿನ ಜನರು ಸಹ ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಒಟ್ಟಾರೆಯಾಗಿ, ಭಾರತವನ್ನು ಹೊರತುಪಡಿಸಿ 13 ದೇಶಗಳು ಗಮನಾರ್ಹವಾದ ಸಂಖ್ಯೆಯಲ್ಲಿ ಈ ಅಭಿಯಾನಕ್ಕೆ ಟ್ವೀಟ್ಗಳ ಮೂಲಕ ಬೆಂಬಲ ನೀಡಿವೆ ಮತ್ತು ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿವೆ.
ಯುಎಸ್ಎ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಟ್ವೀಟ್ ಮಾಡಿದ್ದಾರೆ, ಒಟ್ಟು 5.55 ಲಕ್ಷ ಅಥವಾ ಶೇಕಡಾ 20 ರಷ್ಟು ಕೊಡುಗೆ ನೀಡಿದ್ದಾರೆ. 2.40 ಲಕ್ಷ ಟ್ವೀಟ್ಗಳೊಂದಿಗೆ ಯುಕೆ, 1.87 ಲಕ್ಷ ಟ್ವೀಟ್ಗಳೊಂದಿಗೆ ಆಸ್ಟ್ರೇಲಿಯಾ, 1.60 ಲಕ್ಷ ಟ್ವೀಟ್ಗಳೊಂದಿಗೆ ಕೆನಡಾ ಮತ್ತು 1.03 ಲಕ್ಷ ಟ್ವೀಟ್ಗಳೊಂದಿಗೆ ಯುಎಇ ಟ್ರೆಂಡ್ನಲ್ಲಿ ದೊಡ್ಡ ಪಾತ್ರ ವಹಿಸಿದೆ. ಬಾಂಗ್ಲಾದೇಶ, ನೇಪಾಳ, ಸಿಂಗಾಪುರ, ಶ್ರೀಲಂಕಾ, ಪಾಕಿಸ್ತಾನ, ಮಲೇಷ್ಯಾ, ಮಾರಿಷಸ್ ಮತ್ತು ನ್ಯೂಜಿಲೆಂಡ್ ತಲಾ 20,000 ಕ್ಕೂ ಹೆಚ್ಚು ಟ್ವೀಟ್ಗಳನ್ನು ಮಾಡಿವೆ.
ಹಲವಾರು ಬಾಲಿವುಡ್ ತಾರೆಯರು ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಅಭಿಯಾನವನ್ನು ಬೆಂಬಲಿಸಲು ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೃತಿ ಹ್ಯಾಶ್ಟ್ಯಾಗ್ನೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದರು. ಅಂಕಿತಾ ಲೋಖಂಡೆ, ಕಂಗನಾ ರನೌತ್, ಅನುಪಮ್ ಖೇರ್, ವರುಣ್ ಧವನ್, ಪರಿಣಿತಿ ಚೋಪ್ರಾ ಮತ್ತು ಇನ್ನೂ ಅನೇಕ ತಾರೆಯರು #CBIForSSR ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.