ಇಸ್ಲಾಮಾಬಾದ್: ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ಥಾನ ಜಾಗತಿಕ ಮಟ್ಟದಲ್ಲಿ ಕಡೆಗಣನೆಗೆ ಒಳಗಾಗಿದೆ. ಇದೀಗ ಸೌದಿ ಅರೇಬಿಯಾ ಕೂಡ ಪಾಕಿಸ್ಥಾನಕ್ಕೆ ಮುಖಭಂಗ ಉಂಟುಮಾಡಿದೆ. ಇನ್ನು ಮುಂದೆ ಪಾಕಿಸ್ಥಾನಕ್ಕೆ ಹಣಕಾಸು ಸಾಲ ಅಥವಾ ತೈಲ ಪೂರೈಕೆಯನ್ನು ಮಾಡುವುದಿಲ್ಲ ಎಂದು ಸೌದಿ ಅರೇಬಿಯಾ ಹೇಳಿದೆ.
“ಸೌದಿ ಅರೇಬಿಯ ಮತ್ತು ಪಾಕಿಸ್ಥಾನದ ನಡುವಿನ ಸಂಬಂಧ ಕೊನೆಗೂ ಅಂತ್ಯಗೊಂಡಿದೆ. ಪಾಕಿಸ್ಥಾನಕ್ಕೆ ಇನ್ನುಮುಂದೆ ತಾನು ಹಣದ ಸಾಲ ಅಥವಾ “ಪೂರೈಕೆಯನ್ನು ಮಾಡುವುದಿಲ್ಲ ಎಂದು ಸೌದಿ ಅರೇಬಿಯಾ ಘೋಷಣೆ ಮಾಡಿದೆ: ಎಂದು ಮಿಡ್ಲ್ ಈಸ್ಟ್ ಮಾನಿಟರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾತ್ರವಲ್ಲದೇ, ನವೆಂಬರ್ 2018 ರಲ್ಲಿ ಸೌದಿ ಅರೇಬಿಯಾ ಘೋಷಿಸಿದ 6.2 ಬಿಲಿಯನ್ ಪ್ಯಾಕೇಜಿನ ಭಾಗವಾಗಿದ್ದ 1 ಬಿಲಿಯನ್ ಯುಎಸ್ಡಿ ಹಣವನ್ನು ಹಿಂದಿರುಗಿಸಲು ಪಾಕಿಸ್ಥಾನಕ್ಕೆ ಸೂಚನೆಯನ್ನು ನೀಡಿದೆ. ಇದರಲ್ಲಿ ಒಟ್ಟು 3 ಬಿಲಿಯನ್ ಡಾಲರ್ ಸಾಲ ಮತ್ತು 3.2 ಬಿಲಿಯನ್ ಡಾಲರ್ ತೈಲ ಸಾಲ ಸೌಲಭ್ಯ ಆಗಿತ್ತು.
ಕಳೆದ ವರ್ಷ ಫೆಬ್ರವರಿಯಲ್ಲಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ಥಾನಕ್ಕೆ ಭೇಟಿ ನೀಡಿದಾಗ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು ಎಂದು ಮಾನಿಟರ್ ವರದಿ ಮಾಡಿದೆ.
ಕಾಶ್ಮೀರ ವಿಷಯದ ಬಗ್ಗೆ ಭಾರತದ ವಿರುದ್ಧ ನಿಲುವು ತೆಗೆದುಕೊಳ್ಳದ ಕಾರಣ ಪಾಕಿಸ್ಥಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಸೌದಿ ಅರೇಬಿಯಾ ನೇತೃತ್ವದ ಇಸ್ಲಾಮಿಕ್ ಸಹಕಾರ ಸಂಸ್ಥೆ (ಒಐಸಿ) ಗೆ ಸ್ಪಷ್ಟ ಎಚ್ಚರಿಕೆ ನೀಡಿದ ನಂತರ ಪಾಕಿಸ್ಥಾನದೊಂದಿಗೆ ಸಂಬಂಧ ಕಡಿದುಕೊಳ್ಳುವ ನಿರ್ಧಾರವನ್ನು ಸೌದಿ ತೆಗೆದುಕೊಂಡ ಬೆಳವಣಿಗೆ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.