ಲಕ್ನೋ: ಇತ್ತೀಚಿನ ಇಂಡಿಯಾ ಟುಡೆ-ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ಸಮೀಕ್ಷೆಯಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಭಾರತದ ಅತ್ಯುತ್ತಮ ಕಾರ್ಯನಿರ್ವಹಿಸುವ ಮುಖ್ಯಮಂತ್ರಿಯಾಗಿ ಮೊದಲ ಸ್ಥಾನ ಪಡೆದಿದ್ದಾರೆ.
ಯೋಗಿ ಆದಿತ್ಯನಾಥ್ ಒಟ್ಟು ಮತಗಳ ಪೈಕಿ ಶೇಕಡಾ 24 ರಷ್ಟು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ (ಕಳೆದ ಸಮೀಕ್ಷೆಗಿಂತ 6 ಶೇಕಡಾ ಹೆಚ್ಚು ಅಂಕಗಳು), ಸತತ ಮೂರನೇ ಬಾರಿಗೆ “ಅತ್ಯುತ್ತಮ ಸಿಎಂ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಇತ್ತೀಚಿನ MOTN ಸಮೀಕ್ಷೆಯೊಂದು ತಿಳಿಸಿದೆ.
ಈ ಸಮೀಕ್ಷೆಯ ಪ್ರಕಾರ, ಉನ್ನತವಾಗಿ ಕಾರ್ಯನಿರ್ವಹಿಸುವ ಮುಖ್ಯಮಂತ್ರಿಗಳಲ್ಲಿ ಎರಡನೇ ಸ್ಥಾನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (15 ಶೇಕಡಾ) ಪಡೆದುಕೊಂಡಿದ್ದಾರೆ. 3ನೇ ಸ್ಥಾನವನ್ನು ಆಂಧ್ರದ ಜಗನ್ ಮೋಹನ್ ರೆಡ್ಡಿ (ಶೇ.11) ಪಡೆದುಕೊಂಡಿದ್ದಾರೆ. ನಾಲ್ಕನೇ ಸ್ಥಾನವನ್ನು ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ (9 ಶೇಕಡಾ ಮತಗಳೊಂದಿಗೆ) ಪಡೆದುಕೊಂಡಿದ್ದಾರೆ.
ಜನವರಿ 2020ರ MOTN ಸಮೀಕ್ಷೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಶೇಕಡಾ 18 ರಷ್ಟು ಮತಗಳನ್ನು ಪಡೆದು ಜಂಟಿ ರನ್ನರ್ ಅಪ್ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದರು.
ಆಗಸ್ಟ್ 2019 ರ ಸಮೀಕ್ಷೆಯಲ್ಲೂ ಯೋಗಿ ಆದಿತ್ಯನಾಥ್ ಇತರ ಮುಖ್ಯಮಂತ್ರಿಗಳಿಗಿಂತ ಮುಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.