ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್ ಅವರು ಇಂದು ಜಂಟಿಯಾಗಿ ಮಾರಿಷಸ್ ಜನರಿಗೆ ಸುಪ್ರೀಂಕೋರ್ಟ್ ಕಟ್ಟಡವನ್ನು ಸಮರ್ಪಣೆ ಮಾಡಲಿದ್ದಾರೆ. ಭಾರತೀಯ ಅನುದಾನದ ಸಹಾಯದಿಂದ ಪೋರ್ಟ್ ಲೂಯಿಸ್ ನಗರದಲ್ಲಿ ಮಾರಿಷಸ್ ಸುಪ್ರೀಂಕೋರ್ಟ್ನ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.
ವರದಿಗಳ ಪ್ರಕಾರ, ಈ ಕಟ್ಟಡದ ನಿರ್ಮಾಣವು ಮಾರಿಷಸ್ ರಾಜಧಾನಿಯಲ್ಲಿ ಭಾರತದ ನೆರವಿನ ಮೊದಲ ಮೂಲಸೌಕರ್ಯ ಯೋಜನೆಯೆಂದು ಗುರುತಿಸಲ್ಪಟ್ಟಿದೆ.
ಪೋರ್ಟ್ ಲೂಯಿಸ್ನಲ್ಲಿರುವ ಸುಪ್ರೀಂಕೋರ್ಟ್ ಕಟ್ಟಡವು ಮಾರಿಷಸ್ನಲ್ಲಿ ಭಾರತವು $353 ಮಿಲಿಯನ್ ವಿಶೇಷ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ ಜಾರಿಗೆ ತಂದ ಐದು ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ, ಇದನ್ನು 2016ರಲ್ಲಿ ಭಾರತ ಸರ್ಕಾರವು ಮಾರಿಷಸ್ಗೆ ಭರವಸೆ ನೀಡಿತ್ತು.
ಈ ನಡುವೆ, ನಿನ್ನೆ ಮಾಲ್ಡೀವ್ಸ್ನಲ್ಲಿ ಒಂಬತ್ತು “ಹೆಚ್ಚಿನ ಪ್ರಭಾವದ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು” ಜಾರಿಗೊಳಿಸುವುದಾಗಿ ಭಾರತ ಘೋಷಿಸಿದೆ. ಜನರಿಂದ ಜನರ ಸಂಬಂಧ, ವ್ಯಾಪಾರ, ಮತ್ತು ಆಡಳಿತ ಮತ್ತು ಸುರಕ್ಷತೆಯ ವಿವಿಧ ಅಂಶಗಳನ್ನು ಮೀರಿ ಮಾರಿಷಸ್ನೊಂದಿಗೆ ಭಾರತವು ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಹಂಚಿಕೊಂಡಿದೆ.
ಸಾಲ-ರಾಜತಾಂತ್ರಿಕತೆಯನ್ನು ಬಳಸಿಕೊಂಡು ಈ ರಾಷ್ಟ್ರಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಚೀನಾ ನಡೆಸುತ್ತಿರುವ ಪ್ರಯತ್ನಗಳನ್ನು ಎದುರಿಸಲು ನೆರೆಯ ರಾಷ್ಟ್ರಗಳಾದ ಮಾರಿಷಸ್, ಮಾಲ್ಡೀವ್ಸ್, ಬಾಂಗ್ಲಾದೇಶ, ಮಯನ್ಮಾರ್, ಭೂತಾನ್, ನೇಪಾಳ ಮತ್ತು ಶ್ರೀಲಂಕಾ ಮತ್ತು ಇತರ ದೇಶಗಳಲ್ಲಿ ಅಭಿವೃದ್ಧಿ ಯೋಜನೆಗೆ ನೆರವು ವಿಸ್ತರಿಸಲು ಭಾರತ ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.