ನವದೆಹಲಿ: 59 ಚೀನೀ ಮೂಲದ ಅಪ್ಲಿಕೇಶನ್ಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಪ್ರತ್ರಿಕ್ರಿಯೆ ನೀಡಿರುವ ಯುಎನ್ನ ಮಾಜಿ ಅಮೆರಿಕ ರಾಯಭಾರಿ ಮತ್ತು ಭಾರತೀಯ-ಅಮೆರಿಕನ್ ನಿಕ್ಕಿ ಹ್ಯಾಲೆ ಅವರು, ಚೀನಾದ ಆಕ್ರಮಣಕ್ಕೆ ಮಣಿದು ಹಿಂದಡಿ ಇಡುತ್ತಿಲ್ಲ ಎಂಬುದನ್ನು ಭಾರತವು ತೋರಿಸುತ್ತಲೇ ಬಂದಿದೆ ಎಂದು ಹೇಳಿದ್ದಾರೆ.
ಪೂರ್ವ ಲಡಾಕ್ನ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಪ್ರಸ್ತುತ ಸಂಘರ್ಷದ ಹಿನ್ನೆಲೆಯಲ್ಲಿ ಚೀನಿ ಆ್ಯಪ್ಗಳ ನಿಷೇಧವನ್ನು ಭಾರತ ಮಾಡಿದೆ. ಭಾರತವು ಇಷ್ಟು ಬಲವಾದ ಹೆಜ್ಜೆ ಇಡುವುದನ್ನು ನೋಡುವುದು ಒಳ್ಳೆಯದೆನಿಸಿದೆ ಎಂದು ಹ್ಯಾಲೆ ಟ್ವೀಟ್ ಮಾಡಿದ್ದಾರೆ.
“ಭಾರತವನ್ನು ತನ್ನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದೆಂದು ಪರಿಗಣಿಸುವ ಟಿಕ್ಟಾಕ್ ಸೇರಿದಂತೆ ಚೀನಾದ ಸಂಸ್ಥೆಗಳ ಒಡೆತನದ 59 ಜನಪ್ರಿಯ ಅಪ್ಲಿಕೇಶನ್ಗಳನ್ನು ಭಾರತ ನಿಷೇಧಿಸುವುದನ್ನು ನೋಡುವುದು ಒಳ್ಳೆಯದೆನಿಸಿದೆ. ಭಾರತವು ಚೀನಾದ ಆಕ್ರಮಣದಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ತೋರಿಸುತ್ತಲೇ ಇದೆ” ಎಂದು ಹ್ಯಾಲೆ ಬುಧವಾರ ಟ್ವೀಟ್ ಮಾಡಿದ್ದಾರೆ.
ಭಾರತದ ನಿರ್ಧಾರವನ್ನು ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಸ್ವಾಗತಿಸಿದ ಕೆಲವೇ ಗಂಟೆಗಳ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಭಾರತದ ಕ್ರಮದ ಒಂದು ದಿನದ ನಂತರ, ಯುಎಸ್ ಎರಡು ಚೀನಾದ ಕಂಪನಿಗಳಾದ ಹುವಾವೇ ಟೆಕ್ನಾಲಜೀಸ್ ಕಂಪನಿ ಮತ್ತು ZTE ಕಾರ್ಪೊರೇಷನ್ ಅನ್ನು “ರಾಷ್ಟ್ರೀಯ ಭದ್ರತೆಗೆ ಬೆದರಿಕೆಗಳು” ಎಂದು ಹೆಸರಿಸಿದೆ.
ಭಾರತದ ವಿರುದ್ಧ ಗಡಿ ತಂಟೆ ನಡೆಸಸುತ್ತಿರುವ, ವಿಶ್ವಕ್ಕೆ ಕೊರೋನಾವೈರಸ್ ಪಸರಿಸಿರುವ ಮತ್ತು ಹಾಂಗ್ಕಾಂಗ್ ಅನ್ನು ನಿರ್ಬಂಧಿಸಲು ಪ್ರಯತ್ನಿರುತ್ತಿರುವ ಚೀನಾ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ದೇಶಗಳ ಅಸಮಾಧಾನಕ್ಕೆ ಗುರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.