ನಾಗ್ಪುರ್: 1993ರ ಮುಂಬಯಿ ಸ್ಫೋಟದ ಆರೋಪಿ ಯಾಕುಬ್ ಮೆಮೋನ್ಗೆ ಜುಲೈ 30ಕ್ಕೆ ಮರಣದಂಡನೆ ಎಂದು ಈಗಾಗಲೇ ನಿಶ್ಚಯವಾಗಿದೆ. ನೇಣುಗಂಬಕ್ಕೆ ಆತನನ್ನು ಏರಿಸಲು ಇನ್ನು ಐದು ದಿನಗಳಷ್ಟೇ ಬಾಕಿ ಉಳಿದಿವೆ. ಈ ಹಿನ್ನಲೆಯಲ್ಲಿ ನಾಗಪುರದ ಸೆಂಟ್ರಲ್ ಜೈಲಿನಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.
ಜೈಲು ಅಧಿಕಾರಿಗಳು ಆತನನ್ನು ನೇಣುಗಂಬಕ್ಕೆ ಏರಿಸುವ ಸಲುವಾಗಿ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಡಮ್ಮಿ ಟ್ರಯಲ್(ನಕಲಿ ಪ್ರಯೋಗ)ಗಳನ್ನು ನಡೆಸುತ್ತಿದ್ದಾರೆ. ಜೈಲಿನ ಐಜಿಪಿ ಮೀರನ್ ಬೋರ್ವಂಕರ್ ಶುಕ್ರವಾರ ಜೈಲಿಗೆ ಭೇಟಿ ನೀಡಿ ಎಲ್ಲಾ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಗಲ್ಲಿಗೆ ಬೇಕಾದ ಹಗ್ಗವನ್ನು ಹೊರಗಡೆಯಿಂದ ತಯಾರಿಸಿ ತರಲಾಗಿದೆ, ಇದರ ಮೂಲಕ ನೇಣುಗಂಬಕ್ಕೆ ಏರಿಸುವ ಡಮ್ಮಿ ಟ್ರಯಲ್ಗಳನ್ನು ನಡೆಸಲಾಗುತ್ತಿದೆ. ಯಾಕುಬ್ ಗಲ್ಲಿನ ಸಂಪೂರ್ಣ ಜವಾಬ್ದಾರಿಯನ್ನು ಜೈಲಿ ಸುಪರಿಟೆಂಡೆಂಟ್ ಯೋಗೇಶ್ ದೇಸಾಯಿ ಅವರಿಗೆ ನೀಡಲಾಗಿದೆ, ಕಸಬ್ ಗಲ್ಲಿನ ವೇಳೆ ಇವರು ಪುಣೆಯ ಯೆರವಾಡ ಜೈಲಿನ ಅಧಿಕಾರಿಯಾಗಿದ್ದರು.
ಜುಲೈ 29ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಎಲ್ಲಾ ಸಿದ್ಧತೆಗಳ ಬಗ್ಗೆ ವಿವರಿಸಲಾಗುತ್ತಿದೆ.
1993ರಲ್ಲಿ ಯಾಜುಬ್ ನಡೆಸಿದ್ದ ಸರಣಿ ಸ್ಫೋಟದಿಂದಾಗಿ 257 ಮಂದಿ ಮೃತರಾಗಿದ್ದರು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಆ ಪಾಪಕೃತ್ಯಕ್ಕಾಗಿ ಯಾಕುಬ್ಗೆ ಗಲ್ಲು ಪ್ರಾಪ್ತಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.