ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಹಿಮಾಲಯದ ಗುಹೆ ದೇಗುಲ ಅಮರನಾಥಕ್ಕೆ ಈ ವರ್ಷದ ವಾರ್ಷಿಕ ಯಾತ್ರೆ ಜುಲೈ 21 ರಿಂದ ಪ್ರಾರಂಭವಾಗಿ ಆಗಸ್ಟ್ 3 ಕ್ಕೆ ಅಂತ್ಯಗೊಳ್ಳಲಿದೆ. ಒಟ್ಟು 15 ದಿನಗಳ ಯಾತ್ರೆ ಇರಲಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ 3,880 ಮೀಟರ್ ಎತ್ತರದಲ್ಲಿರುವ ಗುಹೆ ದೇಗುಲಕ್ಕೆ ಕೈಗೊಳ್ಳಲಾಗುವ ಯಾತ್ರೆಗಳನ್ನು ಸಂಪೂರ್ಣವಾಗಿ ನಿರ್ವಹಿಸುವ ಶ್ರೀ ಅಮರನಾಥ್ ಜೀ ದೇವಾಲಯ ಮಂಡಳಿಯ (ಎಸ್ಎಎಸ್ಬಿ) ಅಧಿಕಾರಿಗಳು ಈ ಬಗ್ಗೆಮಾಹಿತಿಯನ್ನು ನೀಡಿದ್ದಾರೆ.
ಯಾತ್ರೆಗಾಗಿ ‘ಪ್ರಥಮ್ ಪೂಜೆ’ ಶುಕ್ರವಾರ ಜಮ್ಮುವಿನಲ್ಲಿ ನಡೆಯಿತು.
ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಈ ಬಾರಿಯ ಯಾತ್ರೆಯ ಅವಧಿಯನ್ನು ಕಡಿಮೆ ಮಾಡಲಾಗಿದೆ.
ಸಾಧುಗಳನ್ನು ಹೊರತುಪಡಿಸಿ, 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ.
ಯಾತ್ರೆಯನ್ನು ಕೈಗೊಳ್ಳುವವರೆಲ್ಲರೂ ಕೋವಿಡ್-19 ನಕಾರಾತ್ಮಕ ಪ್ರಮಾಣಪತ್ರಗಳನ್ನು ಹೊಂದಿರಬೇಕು.
“ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಿದ ಬಳಿಕ ಯಾತ್ರಾರ್ಥಿಗಳು ಯಾತ್ರೆಯನ್ನು ಕೈಗೊಳ್ಳುವ ಮೊದಲು ವೈರಸ್ಗಾಗಿ ತಪಾಸಣೆ ಮಾಡಲಾಗುವುದು” ಎಂದು ಎಸ್ಎಎಸ್ಬಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಧುಗಳನ್ನು ಹೊರತುಪಡಿಸಿ ಎಲ್ಲಾ ಯಾತ್ರಾರ್ಥಿಗಳು ಯಾತ್ರೆಗೆ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
15 ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಗುಹೆ ದೇಗುಲದಲ್ಲಿ ನಡೆಯುವ ‘ಆರತಿ’ಯನ್ನು ದೇಶಾದ್ಯಂತ ಭಕ್ತರಿಗೆ ನೇರ ಪ್ರಸಾರ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ.
ಸ್ಥಳೀಯ ಕಾರ್ಮಿಕರ ಲಭ್ಯತೆ ಇಲ್ಲದಿರುವುದರಿಂದ ಮತ್ತು ಬೇಸ್ಕ್ಯಾಂಪ್ನಿಂದ ಗುಹೆ ದೇಗುಲದವರೆಗೆ ಟ್ರ್ಯಾಕ್ ನಿರ್ವಹಿಸುವಲ್ಲಿನ ತೊಂದರೆಗಳ ಕಾರಣ, ಗ್ಯಾಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್ ಬೇಸ್ ಕ್ಯಾಂಪ್ನಿಂದ ಗುಹೆ ದೇಗುಲಕ್ಕೆ ಹೆಲಿಕಾಪ್ಟರ್ಗಳನ್ನು ಬಳಸಿ ಯಾತ್ರೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾತ್ರೆ 2020 ಅನ್ನು ಉತ್ತರ ಕಾಶ್ಮೀರ ಬಾಲ್ಟಾಲ್ ಮಾರ್ಗದ ಮೂಲಕ ಮಾತ್ರ ಕೈಗೊಳ್ಳಲಾಗುತ್ತದೆ.
“ಪಹಲ್ಗಮ್ ಮಾರ್ಗದ ಮೂಲಕ ಈ ವರ್ಷದ ಯಾತ್ರೆ ಕೈಗೊಳ್ಳಲು ಯಾವುದೇ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಾ ಬಂಧನ ಹಬ್ಬದಂದು ನಡೆಯುವ ಶ್ರವಣ ಪೂರ್ಣಿಮೆಯ ಆಗಸ್ಟ್ 3 ರಂದು ಯಾತ್ರೆ ಮುಕ್ತಾಯಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.