ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಹಣದ ಆಮಿಷವೊಡ್ಡಿ ದೊಡ್ಡ ಮಟ್ಟದಲ್ಲಿ ಮತಾಂತರ ಪ್ರಕ್ರಿಯೆಯನ್ನು ಕ್ರೈಸ್ತ ಮಿಷನರಿಗಳು ನಡೆಸುತ್ತಿದ್ದಾರೆ ಎಂಬುದನ್ನು ಆಂಧ್ರಪ್ರದೇಶದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯ ರಘು ರಾಮಕೃಷ್ಣ ರಾಜು ಅವರು ಒಪ್ಪಿಕೊಂಡಿದ್ದಾರೆ.
ಟೈಮ್ಸ್ ನೌ ಚರ್ಚೆಯಲ್ಲಿ ಮಾತನಾಡಿದ ಅವರು, ದೊಡ್ಡ ಮಟ್ಟದಲ್ಲಿ ಮತಾಂತರ ನಡೆಯುತ್ತಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.
ಈ ಮತಾಂತರಗಳಿಗೆ ರಾಜ್ಯ ಸರ್ಕಾರವು ಯಾವುದೇ ರೀತಿಯ ಬೆಂಬಲ ನೀಡುತ್ತಿಲ್ಲ, ಈ ಹಿಂದೆಯೂ ಮತಾಂತರಗಳು ನಡೆದಿದೆ ಎಂದಿದ್ದಾರೆ.
“ಕ್ರೈಸ್ತ ಮಿಷನರಿಗಳು ವಿದೇಶಗಳಿಂದ ಹರಿದು ಬರುತ್ತಿರುವ ಹಣದ ಅಧಿಕಾರದಿಂದ ಚರ್ಚ್ ನಿರ್ಮಾಣ ಮಾಡುತ್ತಿದ್ದಾರೆ ಮತ್ತು ಮತಾಂತರ ಮಾಡುತ್ತಿದ್ದಾರೆ” ಎಂದಿದ್ದಾರೆ.
ಸರ್ಕಾರ ಕಾನೂನು ಬಾಹಿರ ಮತಾಂತರವನ್ನು ತಡೆಯಲು ಪ್ರಯತ್ನಿಸುತ್ತಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಮತಾಂತರಗಳು ದೇಶದಾದ್ಯಂತ ನಡೆಯುತ್ತಿದೆ ಮತ್ತು ಇದಕ್ಕೆ ನನ್ನ ಸರ್ಕಾರ ಏನು ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ಮಿಷನರಿಗಳು ರಾತ್ರಿವೇಳೆಯಲ್ಲಿ ಕಾಲೋನಿಗಳಿಗೆ ತರಲಿ ನಿಶಬ್ದವಾಗಿ ಧರ್ಮಪ್ರಚಾರಗಳನ್ನು ಮತ್ತು ಸ್ಥಳೀಯರನ್ನು ಮತಾಂತರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.
I accept that large scale conversion happens in Andhra Pradesh, but it happens in other states too: Raghu Ramakrishna Raju, MP, YSRCP tells Padmaja Joshi on @thenewshour AGENDA. | #TirumalaTempleTargeted pic.twitter.com/LTLG6Prt2x
— TIMES NOW (@TimesNow) May 25, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.