ಲಕ್ನೋ: ವಲಸಿಗ ಕಾರ್ಮಿಕರನ್ನು ಸ್ಥಳಾಂತರಗೊಳಿಸುವ ಸಲುವಾಗಿ ಕಾಂಗ್ರೆಸ್ ಪಕ್ಷವು ಬಸ್ಸುಗಳ ಪಟ್ಟಿಯನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ಹಸ್ತಾಂತರ ಮಾಡಿದೆ. ಆದರೆ ವಿಚಿತ್ರವೆಂದರೆ, ಈ ಸಾವಿರ ಬಸ್ಸುಗಳ ಪಟ್ಟಿಯಲ್ಲಿ ದ್ವಿಚಕ್ರ ವಾಹನ ಮತ್ತು ಆಟೋಗಳೂ ಸೇರಿವೆ.
ವಲಸಿಗರನ್ನು ಸ್ಥಳಾಂತರ ಮಾಡಲು 1000 ಬಸ್ಸುಗಳ ವಿಶೇಷ ವ್ಯವಸ್ಥೆಯನ್ನು ಮಾಡಲು ಕಾಂಗ್ರೆಸ್ಸಿಗೆ ಅನುಮತಿ ನೀಡಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಅವರು ಯೋಗಿ ಆದಿತ್ಯನಾಥ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಯೋಗಿ ಸರಕಾರ ಇದಕ್ಕೆ ಸಮ್ಮತಿಯನ್ನು ಸೂಚಿಸಿತ್ತು. ಅಲ್ಲದೆ, ವಾಹನದ ವಿವರಗಳನ್ನು ಹಂಚಿಕೊಳ್ಳುವಂತೆ ತಿಳಿಸಿತ್ತು.
We have done preliminary inquiry & it has come to surface that out of the buses for which they sent details, many are turning out to be 2-wheelers, autos & goods carriers. It’s unfortunate, Sonia Gandhi should answer why they are committing this fraud: Sidharth Nath Singh, UP Min pic.twitter.com/IUWD0LKwuF
— ANI UP (@ANINewsUP) May 19, 2020
ಆದರೆ ವಾಹನದ ವಿವರಗಳು ಬಹಿರಂಗಗೊಂಡ ಬಳಿಕ, ಸಾಮಾಜಿಕ ಜಾಲತಾಣ ಬಳಕೆದಾರರು ವಾಹನದ ರಿಜಿಸ್ಟ್ರೇಷನ್ ಸಂಖ್ಯೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ದತ್ತಾಂಶದೊಂದಿಗೆ ಅಂದರೆ ವೆಹಿಕಲ್ ಕ್ಲಾಸ್ ಮತ್ತು ಮಾಡೆಲ್ ನಂಬರ್ ಇತ್ಯಾದಿಗಳನ್ನು ಟ್ಯಾಲಿ ಮಾಡಲು ಆರಂಭಿಸಿದ್ದಾರೆ.
ತಕ್ಷಣವೇ ಅದರ ಸ್ಕ್ರೀನ್ ಶಾಟ್ ತೆಗೆದು, ಬಸ್ ಎಂದು ಹೇಳಿ ನೀಡಲಾದ ವಾಹನದ ಸಂಖ್ಯೆಯು ಅಸಲಿಗೆ ಬಸ್ಸೇ ಅಲ್ಲ, ಅದು ದ್ವಿಚಕ್ರ, ಆಟೋ ಮತ್ತು ಕಾರುಗಳಾಗಿವೆ ಎಂದಿದ್ದಾರೆ.
Here’s the proof of #PriyankaVadraBusGhotala pic.twitter.com/ruP9fFmE0p
— Sambit Patra (@sambitswaraj) May 19, 2020
ಉದಾಹರಣೆಗೆ ವಾಹನ ಸಂಖ್ಯೆ UP 83T 1006 ಎಂದು ನೀಡಲಾಗಿದ್ದು, ಇದು ಅಸಲಿಗೆ ಆಟೋರಿಕ್ಷಾ ಎಂದು ರಿಜಿಸ್ಟರ್ ಆಗಿದೆ. ಇದರ ರಸ್ತೆ ತೆರಿಗೆ ಮತ್ತು ಇನ್ಸೂರೆನ್ಸ್ 2013 ರಲ್ಲೇ ಅಂತ್ಯವಾಗಿದೆ.
ಸುದ್ದಿ ಮಾಧ್ಯಮಗಳು ಕೂಡ, “ಕಾಂಗ್ರೆಸ್ ವ್ಯವಸ್ಥೆ ಮಾಡಿದ ವಾಹನಗಳ ಪೈಕಿ ಹಲವಾರು ದ್ವಿಚಕ್ರ, ಕಾರು ಮತ್ತು ಆಟೋರಿಕ್ಷಗಳಂತಹ ಸಣ್ಣ ವಾಹನಗಳ ಆಗಿವೆ” ಎಂದಿವೆ.
ಒಟ್ಟಿನಲ್ಲಿ ಕಾಂಗ್ರೆಸ್ ಮಾಡಿದ ಎಡವಟ್ಟು ಈಗ ನಗೆಪಾಟಲಿಗೆ ಈಡಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಈ ಆರೋಪವನ್ನು ತಳ್ಳಿ ಹಾಕಿದ್ದು, ಯೋಗಿ ಸರಕಾರವು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.