ನವದೆಹಲಿ: ಕೇಂದ್ರ ಸರ್ಕಾರದ ಕೋವಿಡ್ -19 ಟ್ರ್ಯಾಕಿಂಗ್ ಮೊಬೈಲ್ ಅಪ್ಲಿಕೇಶನ್ ‘ಆರೋಗ್ಯ ಸೇತು’ ವಿಶ್ವದ ಅತಿ ಹೆಚ್ಚು ಡೌನ್ಲೋಡ್ ಮಾಡಲಾದ ಆರೋಗ್ಯ ರಕ್ಷಣಾ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಮಿತಾಭ್ ಕಾಂತ್ ಅವರು ಶುಕ್ರವಾರ ಹೇಳಿದ್ದಾರೆ.
ಭಾರತದಾದ್ಯಂತ COVID-19 ಪ್ರಕರಣಗಳನ್ನು ಪತ್ತೆಹಚ್ಚುವ ಈ ಅಪ್ಲಿಕೇಶನ್ ಏಪ್ರಿಲ್ನಲ್ಲಿ ವಿಶ್ವದಲ್ಲೇ ಹೆಚ್ಚು ಡೌನ್ಲೋಡ್ ಮಾಡಲಾದ ಟಾಪ್ 10 ಅಪ್ಲಿಕೇಶನ್ಗಳಲ್ಲಿ ಕಾಣಿಸಿಕೊಂಡಿದೆ ಎಂದು ಕಾಂತ್ ಹೇಳಿದ್ದಾರೆ.
Incredible ! India leads the world in leveraging technology to fight COVID-19. #AarogyaSetu:the most downloaded healthcare app & amongst the top 10 downloaded apps in the World for April 2020 in 1st month itself.Never seen this before. We are united in our fight against COVID-19. pic.twitter.com/Ah4GOzdatM
— Amitabh Kant (@amitabhk87) May 8, 2020
ಮೇ 4 ರ ವೇಳೆಗೆ, ಆ್ಯಪ್ ಅನ್ನು 9 ಕೋಟಿ ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದರು, ಅಪ್ಲಿಕೇಶನ್ನ ಡೌನ್ಲೋಡ್ ಮತ್ತು ಬಳಕೆ ಹೆಚ್ಚುತ್ತಲೇ ಇದೆ. ಕೊರೋನಾವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಅಪ್ಲಿಕೇಶನ್ನ ಬಳಕೆಯನ್ನು ಮತ್ತಷ್ಟು ಹೆಚ್ಚಿಸಲು, ಸರ್ಕಾರ ಇದನ್ನು ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಕಡ್ಡಾಯಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14 ರಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದ ವೇಳೆ, ಆ್ಯಪ್ ಅನ್ನು ಡೌನ್ಲೋಡ್ ಮಾಡುವಂತೆ ನಾಗರಿಕರನ್ನು ಕೋರಿದ್ದರು. ಸುತ್ತಮುತ್ತಲಿನ ಯಾರಾದರೂ ವೈರಸ್ಗೆ ತುತ್ತಾಗಿದ್ದರೆ ಅಪ್ಲಿಕೇಶನ್ ಬಳಕೆದಾರರನ್ನು ಹೇಗೆ ಎಚ್ಚರಿಸುತ್ತದೆ ಎಂಬುದನ್ನು ಅವರು ಜನರಿಗೆ ತಿಳಿಸಿದ್ದರು.
ನೀತಿ ಆಯೋಗ ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಧಾನ ಮಂತ್ರಿಗಳ ಕಚೇರಿ ಸ್ಥಾಪಿಸಿದ ಸಮಿತಿಯು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.