ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ‘ಸ್ವಚ್ಛ ಭಾರತ ಅಭಿಯಾನ’ದ ಅಂಗವಾಗಿ ಆರಂಭಿಸಲಾಗಿರುವ ಸ್ವಚ್ಛ ವಿದ್ಯಾಲಯ ಯೋಜನೆಯನ್ವಯ ದೇಶದಾದ್ಯಂತ ಒಟ್ಟು 2.86 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
15 ಕೇಂದ್ರ ಸಚಿವಾಲಯಗಳು, 10ಕ್ಕಿಂತಲೂ ಅಧೀಕ ಖಾಸಗಿ ವಲಯಗಳು ದೇಶದಲ್ಲಿ ಶೌಚಾಲಯ ನಿರ್ಮಿಸುವ ಕಾಯಕದಲ್ಲಿ ತೊಡಗಿವೆ. ಅಂಡಮಾನ್ ಮತ್ತು ನಿಕೋಬಾರ್, ಡಾಮನ್ ಮತ್ತು ಡಿಯೂ, ದಾದ್ರ ಮತ್ತು ನಗರ್ ಹವೇಲಿ, ಕೇರಳ, ಪುದುಚೇರಿ, ಸಿಕ್ಕಿಂಗಳು ಶೇ.100ರ ಟಾರ್ಗೆಟ್ ಪೋರೈಸಿದ್ದು, ಈಗಾಗಲೇ ಬಯಲು ಶೌಚಾಲಯ ಮುಕ್ತವಾಗಿವೆ.
ಈ ದಿನದವರೆಗೆ ದೇಶದಲ್ಲಿ ಒಟ್ಟು 2.86 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಎಚ್ಆರ್ಡಿ ಸಚಿವೆ ಸ್ಮೃತಿ ಇರಾನಿಯವರು ಲೋಕಸಭೆಗೆ ಬುಧವಾರ ಮಾಹಿತಿ ನೀಡಿದ್ದಾರೆ.
ಕಳೆದ ಸ್ವಾತಂತ್ರ್ಯೋತ್ಸವದ ದಿನದಂದು ಪ್ರಧಾನಿ ಮೋದಿಯವರು ಎಲ್ಲಾ ವಿದ್ಯಾಲಯಗಳಲ್ಲಿ ಶೌಚಾಲಯ ನಿರ್ಮಿಸಲು ಒಂದು ವರ್ಷದ ಟಾರ್ಗೆಟ್ ಇರಿಸಿದ್ದರು. ಆ ನಿಟ್ಟಿನಲ್ಲಿ ಇದೀಗ ಪ್ರಯತ್ನಗಳು ಮುಂದುವರೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.