ವಾಷಿಂಗ್ಟನ್: ಕೊರೋನಾವೈರಸ್ಗೆ ಸಂಬಂಧಿಸಿದಂತೆ ಅಮೆರಿಕಾ ಮತ್ತೆ ಚೀನಾವನ್ನು ಟೀಕಿಸಿದ್ದು, ಚೀನಾದ ವುಹಾನ್ನ ಪ್ರಯೋಗಾಲಯದಿಂದಲೇ ಕೊರೋನಾ ಹೊರ ಬಂದಿದೆ ಎಂಬುದಕ್ಕೆ ಸಮರ್ಪಕ ಮಹತ್ವದ ಪುರಾವೆಗಳು ಲಭ್ಯವಿದೆ ಎಂದು ಅಮೆರಿಕಾದ ರಾಜ್ಯ ಸಚಿವ ಮೈಕ್ ಪಾಂಪಿಯೋ ಹೇಳಿಕೆ ನೀಡಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಈ ಹಿಂದೆ, ಕೊರೋನಾ ವೈರಸ್ ಹಬ್ಬುವುದಕ್ಕೆ ಮತ್ತು ಜಗತ್ತಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಕ್ಕೆ ಕಾರಣ ಚೀನಾ. ಏಕೆಂದರೆ ಚೀನಾದ ಪ್ರಯೋಗಾಲಯದಿಂದಲೇ ಕೊರೋನಾ ವೈರಸ್ ಸೋರಿಕೆಯಾಗಿದೆ ಎಂದು ತಿಳಿಸಿದ್ದರು. ಈ ಹೇಳಿಕೆಯನ್ನು ವಿರೋಧಿಸಿದ್ದ ಚೀನಾ ,ಅಮೆರಿಕಾ ಪುರಾವೆ ಒದಗಿಸುವಂತೆಯೂ ಸೂಚಿಸಿತ್ತು. ಅದಕ್ಕೆ ಪ್ರತಿಯಾಗಿ ಈಗ ಪಾಂಪಿಯೋ ಇದಕ್ಕೆ ಸಾಕ್ಷಿಯಾಗಿ ಮಹತ್ವದ ಪುರಾವೆಗಳು ಲಭ್ಯವಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಕುರಿತಂತೆ ಎಬಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಂಪಿಯೋ, ಇದನ್ನು ಅಮೇರಿಕಾದ ತಜ್ಞರು ಮಾನವ ನಿರ್ಮಿತ ಅಥವಾ ತಳಿಯ ಮೂಲಕ ಅಭಿವೃದ್ಧಿ ಮಾಡಲಾದ ವೈರಸ್ ಎಂದು ಹೇಳುತ್ತಿದ್ದು, ಇದನ್ನು ಒಪ್ಪಿಕೊಳ್ಳದಿರಲು ಅಥವಾ ನಂಬದೇ ಇರಲು ನನಗೆ ಯಾವುದೇ ಕಾರಣಗಳಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಗುಪ್ತಚರ ಸಂಸ್ಥೆಗಳೂ ಮಾಹಿತಿ ನೀಡಿದ್ದು, ಆ ವಾದವನ್ನು ಸುಳ್ಳುಎಂದು ಹೇಳಲು ನನ್ನಲ್ಲಿ ಯಾವುದೇ ಕಾರಣಗಳಿಲ್ಲ ಎಂಬುದನ್ನು ಪಾಂಪಿಯೋ ತಿಳಿಸಿದ್ದಾರೆ.
ಅಲ್ಲದೆ ಈ ಸೋಂಕು ವುಹಾನ್ನ ಪ್ರಾಯೋಗಾಲಯದಿಂದ ಬಂತೇ, ಅಥವಾ ಪ್ರಾಣಿ ಪಕ್ಷಿಗಳಿಂದ ಹರಡಿತೇ ಎಂಬುದರ ಕುರಿತಂತೆಯೂ ಗುಪ್ತಚರ ಇಲಾಖೆಗಳು (ODNI) ಸಂಶೋಧನೆ ನಡೆಸುತ್ತಿದ್ದಾರೆ. ಅಲ್ಲದೆ ಮೊದಲು ಕೊರೋನಾ ಚೀನಾದಲ್ಲಿ ಕಾಣಿಸಿಕೊಂಡಿದ್ದು, ಇದರ ಬಗ್ಗೆ ವ್ಯಾಫಕ ಪರೀಕ್ಷೆ ನಡೆಸುತ್ತಿದೆ. ODNI ನ ಈ ಕಾರ್ಯಕ್ಕೆ ಇತರ ಇಂಟಲಿಜೆನ್ಸ್ ಬ್ಯೂರೋಗಳೂ ತಮ್ಮ ಬೆಂಬಲ ಸೂಚಿಸಿರುವುದಾಗಿ ಪಾಂಪಿಯೋ ಹೇಳಿದ್ದಾರೆ.
ಇನ್ನು ಕೊರೋನಾ ಕುರಿತಂತೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಚೀನಾವನ್ನು ಕಟುವಾಗಿ ಟೀಕೆ ಮಾಡುವ ಮೂಲಕ ಕೊರೋನಾಗೆ ವುಹಾನ್ ಪ್ರಯೋಗಾಲಯವೇ ಕಾರಣ ಎಂದು ತಿಳಿಸಿದ ಬೆನ್ನಲ್ಲೇ, ಪಾಂಪಿಯೋ ಅವರು ಈ ಹೇಳಿಕೆ ನೀಡಿದ್ದು ಇದೀಗ ಮಹತ್ವ ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.