ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯಕೀಯ ಲೋಕದ ಸಿಬ್ಬಂದಿಗಳು ಅವಿರತವಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಆದರೆ ಅವರುಗಳ ಮೇಲೆ ದೇಶದ ಕೆಲವೊಂದು ಭಾಗಗಳಲ್ಲಿ ಅಮಾನುಷ ರೀತಿಯಲ್ಲಿ ಹಲ್ಲೆಗಳು ನಡೆಯುತ್ತಿವೆ.
ಇದನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ‘ವೈಟ್ ಅಲರ್ಟ್’ ಪ್ರತಿಭಟನೆ ನಡೆಸಲು ಮುಂದಾಗಿತ್ತು. ಆದರೆ ಆದರೆ ಗೃಹ ಸಚಿವ ಅಮಿತ್ ಶಾ ಅವರು ವೈದ್ಯರುಗಳಿಗೆ ಭರವಸೆಯನ್ನು ನೀಡಿದ್ದು, ಸರ್ಕಾರ ವೈದ್ಯರೊಂದಿಗೆ ಇದೆ ಎಂಬ ವಿಶ್ವಾಸವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವೈಟ್ ಅಲರ್ಟ್ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.
ವೈದ್ಯರುಗಳಿಗೆ ಸಾಂಕ್ರಾಮಿಕ ರೋಗದ ಕರ್ತವ್ಯದ ಸಂದರ್ಭದಲ್ಲಿ ಸಮರ್ಪಕವಾದ ಸುರಕ್ಷತೆಯನ್ನು ಒದಗಿಸುವ ಭರವಸೆ ನೀಡಿದ್ದಾರೆ. ಸಾಂಕೇತಿಕ ಪ್ರತಿಭಟನೆಯನ್ನು ನಡೆಸಬಾರದು, ವೈದ್ಯರುಗಳ ಜೊತೆ ಸರಕಾರ ಸದಾ ಇರುತ್ತದೆ ಎಂದು ಶಾ ಮನವಿ ಮಾಡಿಕೊಂಡಿದ್ದಾರೆ.
ವೈಟ್ ಅಲರ್ಟ್ ಪ್ರತಿಭಟನೆಯ ಹಿನ್ನೆಲೆ ಎಪ್ರಿಲ್ 22 ರಂದು ಕ್ಯಾಂಡಲ್ ಹೊತ್ತಿಸಬೇಕೆಂದು ವೈದ್ಯರು ಮತ್ತು ಆಸ್ಪತ್ರೆಗಳಿಗೆ ಐಎಂಎ ನಿರ್ದೇಶನ ನೀಡಿತ್ತು. ಒಂದು ವೇಳೆ ಸರಕಾರ ಕ್ರಮ ಜರುಗಿಸಲು ವಿಫಲವಾದರೆ ಏಪ್ರಿಲ್ 23ರಂದು ಕರಾಳ ದಿನವನ್ನು ಆಚರಿಸಿದಾಗಿಯೂ ಅದು ಹೇಳಿತ್ತು.
ಇದೀಗ ಅಮಿಷಾ ಭರವಸೆ ಹಿನ್ನಲೆಯಲ್ಲಿ ಐಎಂಎ ತನ್ನ ಸಾಂಕೇತಿಕ ಪ್ರತಿಭಟನೆಯನ್ನು ಪಡೆದುಕೊಂಡಿದೆ.
Delhi: Union Home Minister Amit Shah interacted with doctors & Indian Medical Association (IMA) through video conferencing. He appreciated their good work. He also assured them security & appealed to them to not to do even symbolic protest as proposed by them, govt is with them. pic.twitter.com/Z88Woh8obr
— ANI (@ANI) April 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.