ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸುವ ಸಲುವಾಗಿ ಅಗತ್ಯ ವೈದ್ಯಕೀಯ ಪೂರೈಕೆಗಳನ್ನು ಮಾಡುವುದಾಗಿ ಈಜಿಪ್ಟ್ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಭರವಸೆಯನ್ನು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಅಧ್ಯಕ್ಷ ಸೈರಿಲ್ ರಾಮಫೋಸ ಅವರೊಂದಿಗೆ ಕೊರೋನಾವೈರಸ್ ಸವಾಲಿಗೆ ಸಂಬಂಧಿಸಿದಂತೆ ಉತ್ತಮ ಸಂಭಾಷಣೆಯನ್ನು ನಡೆಸಿದೆ ಮತ್ತು ದಕ್ಷಿಣ ಆಫ್ರಿಕಾಗೆ ಅಗತ್ಯ ವೈದ್ಯಕೀಯ ಪೂರೈಕೆಗಳನ್ನು ನೀಡುವ ಭರವಸೆಯನ್ನು ಭಾರತ ನೀಡುತ್ತದೆ” ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಆರೋಗ್ಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಈಜಿಪ್ಟ್ ಅಧ್ಯಕ್ಷ ಅಬ್ಡೆಲ್ ಫಾತಹ್ ಇಎಸ್-ಸಿಸಿ ಅವರೊಂದಿಗೂ ಮಾತುಕತೆಯನ್ನೂ ನಡೆಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈಜಿಪ್ಟಿಗೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಬೇಕಾದ ಎಲ್ಲಾ ಅಗತ್ಯ ಸಹಾಯಗಳನ್ನು ಭಾರತ ಮಾಡಲಿದೆ ಎಂದಿದ್ದಾರೆ.
ಈಜಿಪ್ಟಿನಲ್ಲಿ ಇರುವ ಭಾರತೀಯರಿಗೆ ಸಹಾಯ ಮಾಡುತ್ತಿರುವುದಕ್ಕೆ ಅವರು ಅಧ್ಯಕ್ಷರಿಗೆ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ.
Had a good discussion with President @CyrilRamaphosa about the COVID-19 challenge, and assured India’s support to South Africa for maintaining essential medical supplies.
— Narendra Modi (@narendramodi) April 17, 2020
Discussed on phone with President Abdel Fattah El-Sisi @AlsisiOfficial about the COVID-19 situation in India and Egypt. India will extend all possible support to Egypt’s efforts to control the spread of the virus and its impact.
— Narendra Modi (@narendramodi) April 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.